ADVERTISEMENT

ಮತ್ತೆ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 6:45 IST
Last Updated 30 ಮಾರ್ಚ್ 2021, 6:45 IST
ನಗರಸಭೆ
ನಗರಸಭೆ   

ದೊಡ್ಡಬಳ್ಳಾಪುರ: ಸದಸ್ಯರ ಅಧಿಕಾರ ಮುಕ್ತಾಯವಾಗಿ ಎರಡು ವರ್ಷ ನಂತರ ಸೋಮವಾರ ಮಧ್ಯಾಹ್ನದ ವೇಳೆಗೆ ನಗರಸಭೆ ಸದಸ್ಯರ ಆಯ್ಕೆಗೆ ಏ.27ರಂದು ಮತದಾನ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾ
ಪಟ್ಟಿ ಪ್ರಕಟಿಸಿತ್ತು. ಆದರೆ, ಸಂಜೆ ವೇಳೆಗೆ ತಾಂತ್ರಿಕ ಕಾರಣ ನೀಡಿ ಚುನಾವಣ ವೇಳಾಪಟ್ಟಿ ಹಿಂದಕ್ಕೆ ಪಡೆದು ಆದೇಶ ಹೊರಡಿಸಿದೆ.

ನಗರಸಭೆ ವಾರ್ಡ್‌ ಮೀಸಲಾತಿ, ವಾರ್ಡ್‌ಗಳ ಗಡಿ ವಿಂಗಡಣೆ ಸರಿ ಇಲ್ಲ ಎಂದು ಪ್ರಶ್ನಿಸಿ ಹಲವು ಜನ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿದ್ದರು. ಈ ಅರ್ಜಿಗಳ ವಿಚಾರಣೆಯಿಂದಾಗಿಯೇ ನಗರಸಭೆ ಸದಸ್ಯರ ಅಧಿಕಾರ ಮುಕ್ತಾಯವಾಗಿ ಎರಡು ವರ್ಷ ಕಳೆದಿದ್ದರೂ ಚುನಾವಣಾ ದಿನಾಂಕ ಪ್ರಕಟವಾಗಿರಲಿಲ್ಲ. ಕೋರ್ಟ್‌ ಸೂಚನೆಯಂತೆ ಎರಡು ತಿಂಗಳ ಹಿಂದೆಯಷ್ಟೇ ರಾಜ್ಯ ಚುನಾವಣಾ ಆಯೋಗ ಮೀಸಲಾತಿ ಕರಡುಪಟ್ಟಿ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿತ್ತು.

ಹಲವರು ಮೀಸಲಾತಿ ಕರಡುಪಟ್ಟಿಗೆ ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು. ವಾರ್ಡ್‌ಗಳ
ಗಡಿ ವಿಂಗಣೆ ಕುರಿತ ಅರ್ಜಿ ಇನ್ನು ವಿಚಾರಣೆ ಹಂತದಲ್ಲೇ ಇದೆ. ಸಾರ್ವಜನಿಕರ ಆಕ್ಷೇಪಣೆ ನಂತರ ಮೀಸಲಾತಿ ಪಟ್ಟಿ ಅಧಿಕೃವಾಗಿ ಪ್ರಕಟಿಸಿಲ್ಲ.

ADVERTISEMENT

ಆದರೆ, ಚುನಾವಣ ವೇಳಾಪಟ್ಟಿ ದಿಢೀರನೇ ಪ್ರಕಟಿಸಿವುದಕ್ಕೆ ಹಲವು ರಾಜಕೀಯ ಪಕ್ಷಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತಂತೆ ಮತ್ತೆ ನ್ಯಾಯಾಲಯದ ಮೊರೆ ಹೋಗುವುದಾಗಿಯೂ
ತಿಳಿಸಿದ್ದರು.

ನಗರಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ಸಂತಸಕ್ಕೆ ಕಾರಣವಾಗಿದ್ದರೆ ಮೀಸಲಾತಿ ಸರಿ ಇಲ್ಲ ಎಂದು ಆಕ್ಷೇಪಣೆ ಸಲ್ಲಿದ್ದ ಆಕಾಂಕ್ಷಿಗಳಿಗೆ ನಿರಾಸೆಯಾಗಿತ್ತು. ಆದರೆ, ಸೋಮವಾರ ಸಂಜೆ ಚುನಾವಣಾವೇಳಾಪಟ್ಟಿಯನ್ನು ಆಯೋಗ ಹಿಂದಕ್ಕೆ ಪಡೆಯುತ್ತಿದ್ದತೆ ಮತ್ತೆ ಆಕಾಂಕ್ಷಿಗಳಲ್ಲಿ ಗೊಂದಲು ಅರಂಭವಾಗಿದೆ.‌

ವೇಳಾಪಟ್ಟಿ ಹಿಂದಕ್ಕೆ ಪಡೆಯಲು ತಾಂತ್ರಿಕ ಕಾರಣ ಎಂದಷ್ಟೇ ಆದೇಶ ಪತ್ರದಲ್ಲಿ ತಿಳಿಸಲಾಗಿದೆ. ಹೀಗಾಗಿ ನಿಖರವಾದ ಕಾರಣ ಕುರಿತು ಯಾರೊಬ್ಬ ಅಧಿಕಾರಿ ಸ್ಪಷ್ಟ ಉತ್ತರ ನೀಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.