ದೊಡ್ಡಬಳ್ಳಾಪುರ: ಇಲ್ಲಿಗೆ ಸಮೀಪದ ಬಿಳಿಜಾಜಿ ಮತ್ತು ತೋರೆನಾಗಸಂದ್ರ ಗ್ರಾಮದ ಜಮೀನಿನಲ್ಲಿ ಜೆಸಿಬಿ ಯಂತ್ರಕ್ಕೆ ಸಿಲುಕಿ ಗಾಯಗೊಂಡಿದ್ದ ನಾಗರಹಾವಿಗೆ ಚಿಕಿತ್ಸೆ ನೀಡಲಾಯಿತು.
ಹಾವು ಗಾಯಗೊಂಡ ಮಾಹಿತಿಯನ್ನು ಸ್ಥಳೀಯ ಸ್ವಯಂ ಸೇವಕ ನೀಲಕಂಠ ಕಾನುವನ್ಯ ಜೀವಿ ಸಂರಕ್ಷಣಾ ಫೌಂಡೇಷನ್ ಸಂಸ್ಥೆಯ ಉರುಗ ತಜ್ಞ ಪ್ರಶಾಂತ್ ಗೋಪಿನಾಥ್ ಅವರಿಗೆ ತಿಳಿಸಿದ್ದರು. ಅವರು ಗಾಯಗೊಂಡಿದ್ದ ಹಾವು ರಕ್ಷಿಸಿ ರಾಜಾನಕುಂಟೆಯಲ್ಲಿನ ಕೇರ್ ಅಂಡ್ ಕ್ಯೂರ್ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಆರಿಫ್ ನೇತೃತ್ವದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.
ಹಾವನ್ನು ತೀವ್ರ ನೀಗಾ ಘಟಕದಲ್ಲಿ ಇರಿಸಲಾಗಿದೆ. ಸಂಪೂರ್ಣ ಚೇತರಿಕೆಯ ನಂತರ ಅರಣ್ಯಕ್ಕೆ ಬಿಡಲಾಗುವುದು ಎಂದು ಪ್ರಶಾಂತ್ ಗೋಪಿನಾಥ್ ತಿಳಿಸಿದ್ದಾರೆ.
ಶಸ್ತ್ರ ಚಿಕಿತ್ಸೆ ನಂತರ ಚೇತರಿಸಿಕೊಂಡ ನಾಗರ ಹಾವು
ಶಸ್ತ್ರ ಚಿಕಿತ್ಸೆ ನಂತರ ಚೇತರಿಸಿಕೊಂಡ ನಾಗರ ಹಾವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.