ADVERTISEMENT

ದೊಡ್ಡಬಳ್ಳಾಪುರ: ಡಾ.ರಾಜ್‌ಕುಮಾರ್‌ ವೃತ್ತಕ್ಕೆ ನಾಮಫಲಕ ಅಳವಡಿಸಿ

​ಪ್ರಜಾವಾಣಿ ವಾರ್ತೆ
Published 9 ಮೇ 2025, 13:37 IST
Last Updated 9 ಮೇ 2025, 13:37 IST
ದೊಡ್ಡಬಳ್ಳಾಪುರ ಡಿ.ಕ್ರಾಸ್‌ನ ಡಾ.ರಾಜಕುಮಾರ್‌ ವೃತ್ತದ ನಾಮಫಲಕ ಶೀಘ್ರವಾಗಿ ಅಳವಡಿಸುವಂತೆ ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ವತಿಯಿಂದ ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್‌ ಅವರಿಗೆ ಮನವಿ ಸಲ್ಲಿಸಲಾಯಿತು
ದೊಡ್ಡಬಳ್ಳಾಪುರ ಡಿ.ಕ್ರಾಸ್‌ನ ಡಾ.ರಾಜಕುಮಾರ್‌ ವೃತ್ತದ ನಾಮಫಲಕ ಶೀಘ್ರವಾಗಿ ಅಳವಡಿಸುವಂತೆ ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ವತಿಯಿಂದ ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್‌ ಅವರಿಗೆ ಮನವಿ ಸಲ್ಲಿಸಲಾಯಿತು   

ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್‌ನ ಡಾ.ರಾಜ್‌ಕುಮಾರ್‌ ವೃತ್ತದಲ್ಲಿ ರಸ್ತೆ ವಿಸ್ತರಣೆ ವೇಳೆ ತೆಗೆದಿರುವ ಡಾ.ರಾಜಕುಮಾರ್‌ ನಾಮಫಲಕವನ್ನು ಶೀಘ್ರವಾಗಿ ಅಳವಡಿಸುವಂತೆ ತಾಲ್ಲೂಕು ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘ ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್‌ ಅವರಿಗೆ ಮನವಿ  ಮಾಡಿದೆ.

ನಗರದ ಡಿ.ಕ್ರಾಸ್‌ ಸಮೀಪದ ವೃತ್ತಕ್ಕೆ ಪದ್ಮಭೂಷಣ ಡಾ.ರಾಜ್‌ ಕುಮಾರ್‌ ವೃತ್ತ ಎಂದು ನಾಮ ಫಲಕವನ್ನು ನಗರಸಭೆಯಿಂದ ಅಳವಡಿಸಲಾಗಿತು. ಮೂರು ವರ್ಷಗಳ ಹಿಂದೆ ರಸ್ತೆ ವಿಸ್ತರಣೆಗಾಗಿ ವೃತ್ತ ಹಾಗೂ ಶಿಲಾಫಲಕವನ್ನು ತೆಗೆದು ಹಾಕಲಾಗಿದೆ. ಕಾಮಗಾರಿ ಪೂರ್ಣಗೊಳಿಸಿದ ಬಳಿಕ ನಾಮಫಲಕ ಹಾಗೂ ಶಿಲಾಫಲಕ ಅಳವಡಿಸಿಲ್ಲ. ನೂತನ ಶಿಲಾಫಲಕ ಹಾಗೂ ನಾಮಫಲಕ ಅಳವಡಿಸಬೇಕೆಂದು ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.

ನಗರಸಭೆ ಸದಸ್ಯ ಆನಂದ್, ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ವಿಠಲ್‌ ರಾವ್, ಅಪ್ಪಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಸುರೇಶ್‌ರಾವ್, ಖಜಾಂಚಿ ಡಿ.ಎನ್‌.ತಿಮ್ಮರಾಜು, ಸಂಘಟನಾ ಕಾರ್ಯದರ್ಶಿ ವಿ.ಪರಮೇಶ್, ನಗರ ಉಪಾಧ್ಯಕ್ಷ ದೃವನಾರಾಯಣ್, ಪದಾಧಿಕಾರಿಗಳಾದ ವೆಂಕಟೇಶ್, ಸೋಮು, ಮಹದೇವ್‌ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.