
ಪ್ರಜಾವಾಣಿ ವಾರ್ತೆ
ಸೂಲಿಬೆಲೆ(ಹೊಸಕೋಟೆ): ರಾಸುಗಳಿಗೆ ಪ್ರಥಮ ಪೂಜೆ ಸಲ್ಲಿಸುವುದು ಧಾರ್ಮಿಕ ಆಚರಣೆ, ಸಂಕ್ರಾಂತಿ ಕೇವಲ ಹಬ್ಬವಲ್ಲ. ಅದೊಂದು ಸಮೃದ್ಧಿ ಸಂಕೇತ ಎಂದು ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು.
ತಾಲ್ಲೂಕಿನ ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿಯಲ್ಲಿ ಶಾಸಕ ಶರತ್ ಬಚ್ಚೇಗೌಡರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಹಾಗೂ ರಾಸುಗಳ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಕೃತಿಯನ್ನು ಪೂಜಿಸುವ ಪದ್ಧತಿ ರೈತಾಪಿ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ರೈತ ತಾನು ಬೆಳೆದ ಬೆಳೆಯನ್ನು ಕಟಾವು ಮಾಡಿ ರಾಶಿ ಮಾಡಿ ಸಮೃದ್ಧಿಗೊಳಿಸುವ ಸಲುವಾಗಿ ಅನ್ನ ಕೊಟ್ಟ ಭೂಮಿ ತಾಯಿ, ರಾಸು ಮತ್ತು ಫಸಲಿಗೆ ವಿಶೇಷ ಪೂಜೆ ಸಲ್ಲಿಸುತ್ತಾನೆ ಎಂದು ಅಭಿಪ್ರಾಯಪಟ್ಟರು.
ಬಿ.ವಿ ಭೈರೇಗೌಡ, ಋತಿಕ್, ಚಿರಾಯು, ಶ್ರೇಯಸ್, ಸೌಮ್ಯ ಸತೀಶ ಗೌಡ, ಗೀತಮ್ಮ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.