ತೂಬಗೆರೆ(ದೊಡ್ಡಬಳ್ಳಾಪುರ): ತಾಲ್ಲೂಕಿನ ಹಾಡೋನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಂಜೇಗೌಡ, ಉಪಾಧ್ಯಕ್ಷರಾಗಿ ಅನುಸೂಯಮ್ಮ ಶೆಟ್ಟಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ನಂಜೇಗೌಡ ಮಾತನಾಡಿ, ಎಲ್ಲಾ ಸದಸ್ಯರು ಒಮ್ಮತದಿಂದ ಬೆಂಬಲ ನೀಡಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಸಂಘವನ್ನು ಆರ್ಥಿಕವಾಗಿ ಸದೃಢಮಾಡಲು ನ್ಯಾಯಬೆಲೆ ಮಳಿಗೆ ಆರಂಭಿಸಲಾಗುವುದು. ಬಡ್ಡಿರಹಿತ ಕೃಷಿ ಸಾಲವು ಹೆಚ್ಚಿನ ರೈತರಿಗೆ ದೊರೆಯುಂತೆ ಮಾಡಲಾಗುವುದು ಎಂದು ತಿಳಿಸಿದರು.
ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಜಿ.ಎನ್. ರಂಗಪ್ಪ, ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆಂಜನಪ್ಪ, ತೂಬಗೆರೆ ಬ್ಲಾಕ್ ಕಾಂಗ್ರ್ ಅಧ್ಯಕ್ಷ ರವಿಸಿದ್ದಪ್ಪ, ಹಾಡೋನಹಳ್ಳಿ ವಿವಿಧೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕ ಜಿ.ಕೆ.ಶ್ರೀಧರ್, ಎಂ.ಮುನೇಗೌಡ, ಎಚ್. ಎಸ್.ಪಿಳ್ಳಪ್ಪ, ಆರ್.ಹನುಮಂತರಾಯಪ್ಪ, ಎನ್.ಮುನಿರಾಜು, ಎನ್.ವಿಜಯಕುಮಾರ್,ಬಿ.ವೆಂಕಟೇಶ್, ಗಂಗಲಕ್ಷಮ್ಮ, ರಾಮನಾಯಕ್, ಲೋಕನಾಯಕ್, ಬ್ಯಾಂಕ್ ಸಿಬ್ಬಂದಿ ಟಿ.ಎನ್.ರಾಘವೇಂದ್ರ, ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.