ADVERTISEMENT

‘ಪೊಲೀಸರ ಕರ್ತವ್ಯ, ನಿಷ್ಠೆ ಗೌರವಿಸಿ’

ಕರವೇ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 14:10 IST
Last Updated 10 ಫೆಬ್ರುವರಿ 2019, 14:10 IST
ಪಿಎಸ್‍ಐ ಜಗದೀಶ್ ವೃತ್ತದಲ್ಲಿ ಅವರ ಜನ್ಮದಿನಾಚರಣೆ ನಡೆಯಿತು
ಪಿಎಸ್‍ಐ ಜಗದೀಶ್ ವೃತ್ತದಲ್ಲಿ ಅವರ ಜನ್ಮದಿನಾಚರಣೆ ನಡೆಯಿತು   

ದೊಡ್ಡಬಳ್ಳಾಪುರ: ಕಾನೂನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳ ಪ್ರಾಮಾಣಿಕ ಕರ್ತವ್ಯ ಸಮಾಜಕ್ಕೆ ಸ್ಫೂರ್ತಿ ಎಂದು ಕರವೇ (ಪ್ರವೀಣ್ ಶೆಟ್ಟಿ) ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ಹೇಳಿದರು.

ನಗರದ ಹೊರವಲಯದ ಪಿಎಸ್‍ಐ ಜಗದೀಶ್ ವೃತ್ತದಲ್ಲಿ ಭಾನುವಾರ ಹುತಾತ್ಮ ಜಗದೀಶ್ ಅಭಿಮಾನಿ ಬಳಗದಿಂದ ನಡೆದ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

’ಸಮಾಜದಲ್ಲಿ ಗಲಭೆಗಳು ಸೃಷ್ಟಿಯಾದಾಗ ಪೊಲೀಸರು ನಿಸ್ವಾರ್ಥದಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರ ರಕ್ಷಣೆಗೆ ನಿಲ್ಲುತ್ತಾರೆ. ಹಬ್ಬ ಹರಿದಿನ ಎನ್ನದೆ ಕರ್ತವ್ಯ ಪಾಲನೆಗೆ ನಿಲ್ಲುತ್ತಾರೆ. ಇಂತಹ ಅಧಿಕಾರಿಗಳನ್ನು ಸಾರ್ವಜನಿಕರು ನೆನೆಯಬೇಕು. ಪ್ರಾಮಾಣಿಕ ಅಧಿಕಾರಿಗಳ ಸೇವೆಯನ್ನು ಮುಂದಿನ ಪೀಳಿಗೆಗೆ ತಿಳಿಯುವಂತೆ ಮಾಡಬೇಕು‘ ಎಂದರು.

ADVERTISEMENT

ನಗರಸಭೆ ಸದಸ್ಯ ಎಂ.ಮಲ್ಲೇಶ್ ಮಾತನಾಡಿ, ’ಕರ್ತವ್ಯ ಪಾಲನೆ ವೇಳೆ ಹತ್ಯೆಗೀಡಾದ ಜಗದೀಶ್ ಎಲ್ಲರಿಗೂ ಮಾದರಿಯಾಗಿದ್ದಾರೆ. ಸಮಾಜದ ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಾಣ ತ್ಯಾಗಕ್ಕೂ ಪೊಲೀಸರು ಯೋಧರಂತೆ ಸಿದ್ಧವಾಗಿರುತ್ತಾರೆ ಎನ್ನುವುದಕ್ಕೆ ಜಗದೀಶ್ ಸಾಕ್ಷಿ. ಅಧಿಕಾರಿಗಳು ಕರ್ತವ್ಯ ಮುಗಿಸಿದ ಬಳಿಕ ಅವರನ್ನು ಸಮಾಜ ಮರೆಯುತ್ತದೆ ಎನ್ನುವ ಮಾತನ್ನು ನಗರದ ಜನ ಸುಳ್ಳು ಮಾಡಿಸಿ,ಅಮರರಾದ ಅಧಿಕಾರಿಯನ್ನು ಪ್ರತಿ ವರ್ಷ ನೆನೆಯುತ್ತಿರುವುದು ಸಂತಸದ ವಿಷಯ‘ ಎಂದರು.

ಡಿವೈಎಸ್‌ಪಿ ಆರ್.ಮೋಹನ್‍ಕುಮಾರ್, ನಗರ ಪೊಲೀಸ್ ಠಾಣೆ ಸಬ್‍ ಇನ್‌ಸ್ಪೆಕ್ಟರ್ ವೆಂಕಟೇಶ್, ಅಪರಾಧ ವಿಭಾಗದ ಸಬ್ ಇನ್‌ಸ್ಪೆಕ್ಟರ್ ರಂಗನಾಥ್, ದಿವಂಗತ ಜಗದೀಶ್ ಪತ್ನಿ ರಮ್ಯ, ತಂದೆ ಶ್ರೀನಿವಾಸಯ್ಯ, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಪರಮೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಮಿಳಾ ಮಹದೇವ್, ಕರವೇ (ಪ್ರವೀಣ್ ಶೆಟ್ಟಿ) ಬಣದ ತಾಲ್ಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಕಾಂಗ್ರೆಸ್ ಒಬಿಸಿ ಅಧ್ಯಕ್ಷ ಪು.ಮಹೇಶ್, ಜಯಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಪ್ರಧಾನ ಕಾರ್ಯದರ್ಶಿ ಎಸ್‍ಎಲ್‍ಎನ್ ವೇಣು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.