ADVERTISEMENT

ಹೊಸಕೋಟೆ | ಮಳೆ: ಕೋಡಿ ಬಿದ್ದ ಕೆರೆಗಳು

ಸೂಲಿಬೆಲೆ, ನಂದಗುಡಿ ಹಾಗೂ ತಾವರೆಕೆರೆ ಸುತ್ತಮುತ್ತ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 7:43 IST
Last Updated 25 ಜುಲೈ 2020, 7:43 IST
ತಾವರೆಕೆರೆ ಕೆರೆಗೆ ಕೋಡಿ ಬಿದ್ದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ನೀರಿನ ನಡುವೆ ಓಡಾಡಿದ ನೋಟ
ತಾವರೆಕೆರೆ ಕೆರೆಗೆ ಕೋಡಿ ಬಿದ್ದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ನೀರಿನ ನಡುವೆ ಓಡಾಡಿದ ನೋಟ   

ಸೂಲಿಬೆಲೆ: ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ, ನಂದಗುಡಿ ಹಾಗೂ ತಾವರೆಕೆರೆ ಸುತ್ತಮುತ್ತಲು ಗುರುವಾರ ರಾತ್ರಿ ಭಾರಿ ಮಳೆಯಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

ತಾವರೆಕೆರೆ ಗ್ರಾಮದ ಕೆರೆ ಕೋಡಿಯಲ್ಲಿ ನೀರು ಹರಿದು 20 ವರ್ಷ ಕಳೆದಿತ್ತು ಎಂದು ಹಿರಿಯರೊಬ್ಬರು ಹರ್ಷ ವ್ಯಕ್ತಪಡಿಸಿದರು. ಮಕ್ಕಳು, ವಯಸ್ಕರು ಕೆರೆ ಕೋಡಿಯ ನೀರಿನಲ್ಲಿ ಕುಣಿದು ಕುಪ್ಪಳಿಸಿದರು.

ತಾವರೆಕೆರೆಯ ಕೆರೆಗೆ ಕೆ.ಸಿ.ವ್ಯಾಲಿಯ ನೀರು ಬಿಡಲಾಗುತ್ತಿದ್ದು, ಕೆರೆಯಲ್ಲಿ ನೀರು ಸಂಗ್ರಹವಾಗಿತ್ತು. ಅದರ ಜೊತೆಗೆ ಗುರುವಾರ ರಾತ್ರಿ ಪೂರ್ತಿ ಸುರಿದ ಭಾರಿ ಮಳೆಗೆ ಕೆರೆ ತುಂಬಿದೆ. ಮುಂದೆ ಕಾಲುವೆ ಮುಚ್ಚಿಹೋಗಿರುವುದರಿಂದ ಕೆಲವು ಹೊಲಗಳಿಗೆ ನೀರು ನುಗ್ಗಿದೆ.

ADVERTISEMENT

ಶುಕ್ರವಾರ ಬೆಳಿಗ್ಗೆವರೆಗೆ ಸೂಲಿಬೆಲೆಯಲ್ಲಿ 52.8 ಮಿ.ಮೀ, ಹೊಸಕೋಟೆ 25.8, ಜಡಿಗೇನಹಳ್ಳಿ 10.8 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.