ADVERTISEMENT

ಹೊಸಕೋಟೆ: ರೋಟರಿ ಸಮಾಜಮುಖಿ ಸೇವೆಗೆ ಉತ್ತಮ ವೇದಿಕೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 9:11 IST
Last Updated 26 ಆಗಸ್ಟ್ 2021, 9:11 IST
ಹೊಸಕೋಟೆಯ ರೋಟರಿ ಸೆಂಟ್ರಲ್ ಸಂಸ್ಥೆಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ವಿ. ವಿಜಯ್ ಕುಮಾರ್‌ ಅವರನ್ನು ಪದಾಧಿಕಾರಿಗಳು ಹೂಗುಚ್ಛ ನೀಡಿ ಅಭಿನಂದಿಸಿದರು
ಹೊಸಕೋಟೆಯ ರೋಟರಿ ಸೆಂಟ್ರಲ್ ಸಂಸ್ಥೆಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ವಿ. ವಿಜಯ್ ಕುಮಾರ್‌ ಅವರನ್ನು ಪದಾಧಿಕಾರಿಗಳು ಹೂಗುಚ್ಛ ನೀಡಿ ಅಭಿನಂದಿಸಿದರು   

ಹೊಸಕೋಟೆ: ‘145ಕ್ಕೂ ಹೆಚ್ಚು ದೇಶಗಳಲ್ಲಿ ರೋಟರಿ ಸಂಸ್ಥೆ ಕೆಲಸ ಮಾಡುತ್ತಿದ್ದು, ಸಮಾಜಕ್ಕಾಗಿ ಸೇವೆ ಮಾಡಲು ಇಚ್ಛಿಸುವವವರಿಗೆ ಸಂಸ್ಥೆ ಉತ್ತಮ ವೇದಿಕೆಯಾಗಿದೆ’ ಎಂದು ರೋಟರಿ ಹೊಸಕೋಟೆ ಸೆಂಟ್ರಲ್‌ಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ವಿ. ವಿಜಯ್ ಕುಮಾರ್ ಹೇಳಿದರು.

ರೋಟರಿ ಸಂಸ್ಥೆಯ ಹೊಸಕೋಟೆ ತಾಲ್ಲೂಕು ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ತಿಂಗಳಿಗೆ ಎರಡು ಸೇವಾ ಚಟುವಟಿಕೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಈಗಾಗಲೇ, ತಾಲ್ಲೂಕಿನಲ್ಲಿ ಇಂದಿರಾನಗರದ ರೋಟರಿ ಸಂಸ್ಥೆ ಸಹಯೋಗದಲ್ಲಿ 34 ಶಾಲೆ, ಅಂಗನವಾಡಿಗಳಿಗೆ ಸಹಾಯ ಮಾಡಿದ್ದು ಮುಂದಿನ ದಿನಗಳಲ್ಲಿ ಅದನ್ನು ವಿಸ್ತರಿಸುವ ಯೋಜನೆ ಹೊಂದಲಾಗಿದೆ ಎಂದು
ತಿಳಿಸಿದರು.

ADVERTISEMENT

ರೋಟರಿ ಸಂಸ್ಥೆಯ ಜಿಲ್ಲಾ ಡೆಪ್ಯುಟಿ ಗೌರ್ನರ್‌ ಡಿ.ಎಸ್. ರಾಜಕುಮಾರ್ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಸದಸ್ಯತ್ವ ಹೊಂದಿರುವವರಿಗೆ ಸೇವಾ ಮನೋಭಾವ ತಾನಾಗಿಯೇ ಬರುತ್ತದೆ. ರೋಟರಿ ಸಂಸ್ಥೆಯಲ್ಲಿ ಮೇಲುಕೀಳು ಎಂಬ ಮನೋಭಾವವಿಲ್ಲ. ಸ್ವಾರ್ಥಕ್ಕಿಂತ ಸಮಾಜದ ಕೆಲಸವೇ ಮುಖ್ಯವೆಂದು ಕೆಲಸ ಮಾಡುವ ಗುಣ ಬೆಳೆಯುತ್ತದೆ ಎಂದರು.

ಡೆಪ್ಯುಟಿ ಗೌರ್ನರ್‌ ಸುಧಾಕರ್, ಶಿವಮೂರ್ತಿ, ಬಚ್ಚಣ್ಣ, ರಮೇಶ್, ಭದ್ರಾಚಾರಿ, ಸರೋಜಮ್ಮ, ರಾಮಚಂದ್ರಪ್ಪ, ರವೀಂದ್ರನಾಥ್, ಸುರೇಶ್, ಕೊರಳೂರು ಸುರೇಶ್, ಗೋವಿಂದರಾಜು, ಸುಬ್ಬರಾಜು, ಲಕ್ಷಣ್ ಗೌಡ, ದೀಪ್ ಜೈನ್, ಇಂತಿಯಾಜ್ ಪಾಷ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.