ADVERTISEMENT

ಏಕಾಂಗಿ ‘ಗೌರಿ’ಗೆ ಸಂಗಾತಿ ಹುಡುಕಾಟ; ಒಂಟಿಯಾಗಿರುವ ಜಿರಾಫೆ

ಮೂರ‍್ನಾಲ್ಕು ವರ್ಷದಿಂದ ಒಂಟಿತನದಿಂದ ಮಂಕಾಗಿರುವ ಹೆಣ್ಣು ಜಿರಾಫೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
ಬನ್ನೇರುಘಟ್ಟದಲ್ಲಿ ಜಿರಾಫೆ ಗೌರಿ ಯದುನಂದನೊಂದಿಗಿದ್ದ ದೃಶ್ಯ (ಸಂಗ್ರಹ ಚಿತ್ರ)
ಬನ್ನೇರುಘಟ್ಟದಲ್ಲಿ ಜಿರಾಫೆ ಗೌರಿ ಯದುನಂದನೊಂದಿಗಿದ್ದ ದೃಶ್ಯ (ಸಂಗ್ರಹ ಚಿತ್ರ)   

ಆನೇಕಲ್ : ಮೂರು ವರ್ಷಗಳಿಂದ ಒಂಟಿಯಾಗಿ ಕಾಲ ಕಳೆಯುತ್ತಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ ಹೆಣ್ಣು ಜಿರಾಫೆ ಗೌರಿ ಸಂಗಾತಿ ಇಲ್ಲದೆ ಮಂಕಾಗಿದೆ.

ಪ್ರಾಣಿ ವಿನಿಮಯ ಯೋಜನೆಯಡಿ ಬನ್ನೇರುಘಟ್ಟಕ್ಕೆ ಮೈಸೂರಿನ ಮೃಗಾಲಯದಿಂದ 2018ರಲ್ಲಿ ಗೌರಿ ಜಿರಾಫೆ ತರಲಾಗಿತ್ತು. ಎರಡು ವರ್ಷ ಏಕಾಂಗಿಯಾಗಿದ್ದ ಗೌರಿಗೆ ಮೈಸೂರಿನ ಮೃಗಾಲಯದಿಂದ ಯದುನಂದನ ಎಂಬ ಗಂಡು ಜಿರಾಫೆಯನ್ನು ಜತೆಗೂಡಿಸಲಾಗಿತ್ತು. ಆದರೆ, ಒಂದೇ ವರ್ಷದಲ್ಲಿ ಯದುನಂದನ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿತು. ಅಂದಿನಿಂದ ಮತ್ತೆ ಗೌರಿಗೆ ಒಂಟಿತನ ಬದುಕಾಯಿತು. ಸಂಗಾತಿಯಿಲ್ಲದೆ ಮಂಕಾಗಿದೆ. 

ಜಿರಾಫೆಯ ವರ್ತನೆ ಗಮನಿಸಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್‌ ಹಾಗೂ ಸಿಬ್ಬಂದಿ,  ಗೌರಿಗೆ ಜೋಡಿ ಹುಡುಕುವ ಪ್ರಯತ್ನ ನಡೆಸಿದೆ.

ADVERTISEMENT

ಬನ್ನೇರುಘಟ್ಟದಲ್ಲಿ ಗಂಡು ಜಿರಾಫೆಗಳಿವೆ. ಆದರೆ ಎಲ್ಲವೂ ಒಂದೇ ಕುಟುಂಬಕ್ಕೆ ಸೇರಿರುವುದರಿಂದ ಬೇರೆ ಮೃಗಾಲಯದಿಂದ ಜಿರಾಫೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಸೂರ್ಯಸೇನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂಟಿಯಾಗಿರುವ ಜಿರಾಫೆ ಗೌರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.