ADVERTISEMENT

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರು ಹುಲಿ ಮರಿ ಜನನ!

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 20:32 IST
Last Updated 8 ಮಾರ್ಚ್ 2025, 20:32 IST
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಫೆಬ್ರುವರಿಯಲ್ಲಿ ಜನ್ಮ ತಾಳಿದ ಹುಲಿ ಮರಿಗಳು
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಫೆಬ್ರುವರಿಯಲ್ಲಿ ಜನ್ಮ ತಾಳಿದ ಹುಲಿ ಮರಿಗಳು   

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಎರಡು ಹುಲಿಗಳು ಕಳೆದ ತಿಂಗಳು ಎರಡು ದಿನಗಳ ಅಂತರದಲ್ಲಿ ಆರು ಮರಿಗಳಿಗೆ ಜನ್ಮ ನೀಡಿವೆ. ಇದರಿಂದಾಗಿ ಜೈವಿಕ ಉದ್ಯಾನಕ್ಕೆ ಒಟ್ಟು ಆರು ಮರಿಗಳು ಸೇರ್ಪಡೆಯಾಗಿದ್ದು, ಉದ್ಯಾನದಲ್ಲಿ ಹುಲಿಗಳ ಸಂಖ್ಯೆ 19ಕ್ಕೆ ಏರಿದಂತಾಗಿದೆ.  

ಆರು ವರ್ಷದ ‘ಹಿಮಾ’ ಫೆಬ್ರುವರಿ 14ರಂದು ನಾಲ್ಕು ಮರಿಗಳಿಗೆ ಹಾಗೂ ‘ಅರಣ್ಯ’ ಎಂಬ ಮತ್ತೊಂದು ಹುಲಿ ಫೆ.16ರಂದು ಎರಡು ಮರಿಗಳಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್‌ ತಿಳಿಸಿದರು.

ತಾಯಿಯೊಂದಿಗೆ ಹುಲಿ ಮರಿಗಳು
ಹುಲಿ ಮರಿಗಳಿಗೆ ಹಾಲುಣಿಸುತ್ತಿರುವ ಸಿಬ್ಬಂದಿ

ಬನ್ನೇರುಘಟ್ಟದಲ್ಲಿ ಚಿರತೆ ಸಾವು

ADVERTISEMENT

ಬನ್ನೇರುಘಟ್ಟ ಉದ್ಯಾನದ ಶ್ಯಾಡೊ ಎಂಬ 16 ವರ್ಷದ ಗಂಡು ಚಿರತೆ ಮಾರ್ಚ್‌ 4ರಂದು ಮೃತಪಟ್ಟಿದೆ.  2011ರಲ್ಲಿ ಬಂಡಿಪುರ ಅರಣ್ಯದಲ್ಲಿ ಈ ಚಿರತೆಯನ್ನು ಸಂರಕ್ಷಿಸಿ ಆರೈಕೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ ಪುನರ್‌ ವಸತಿ ಕೇಂದ್ರಕ್ಕೆ ಕಳಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.