ADVERTISEMENT

ಚಿನ್ನದ ಖಡಗಕ್ಕೆ ರೇಡಿಯಂ ಲೇಪಿಸಿ ಕಳ್ಳ ಸಾಗಣೆ; ಬಂಧನ

​ಪ್ರಜಾವಾಣಿ ವಾರ್ತೆ
Published 24 ಮೇ 2023, 3:59 IST
Last Updated 24 ಮೇ 2023, 3:59 IST
ಕಳ್ಳ ಸಾಗಣೆ ಮಾಡಲು ಚಿನ್ನದ ಖಡಕ್ಕೆ ರೇಡಿಯಂ ಲೇಪಿಸಿದ್ದ ಆರೋಪಿ
ಕಳ್ಳ ಸಾಗಣೆ ಮಾಡಲು ಚಿನ್ನದ ಖಡಕ್ಕೆ ರೇಡಿಯಂ ಲೇಪಿಸಿದ್ದ ಆರೋಪಿ   

ದೇವನಹಳ್ಳಿ: ರೇಡಿಯಂ ಲೇಪಿಸಿದ ಚಿನ್ನದ ಕಡಗ ಧರಿಸಿ ಬ್ಯಾಂಕಾಕ್‌ನಿಂದ ಬಂದಿಳಿದ ಪ್ರಯಾಣಿಕನನ್ನು ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಬ್ಯಾಂಕಾಕ್‌ನಿಂದ ಬಂದಿಳಿದ ಪ್ರಯಾಣಿಕನನ್ನು ತಪಾಸಣೆಗೆ ಒಳಪಡಿಸಿದಾಗ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಕೈಗೆ ಧರಿಸುವ ಕಡಗದ ರೂಪದಲ್ಲಿದ್ದ 499 ಗ್ರಾಂ ತೂಕದ ಚಿನ್ನವನ್ನು ಚಿನ್ನ ಎಂದು ಗುರುತಿಸದಂತೆ ರೇಡಿಯಂ ಕೋಟಿಂಗ್‌ ಮಾಡಿ ಸಾಗಾಣೆ ಮಾಡುತ್ತಿದ್ದ.  

ADVERTISEMENT

ಪ್ರಯಾಣಿಕನ ಹಿಂದಿನ ಅಪರಾಧ ಕೃತ್ಯಗಳಿಂದ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ಕೂಲಂಕಷವಾಗಿ ಪರಿಶಿಲಿಸಿದಾಗ  ಕೃತ್ಯ ಬೆಳಕಿಗೆ ಬಂದಿದೆ. ವಶಕ್ಕೆ ಪಡೆದ ಚಿನ್ನದ ಕಡಗದ ಒಟ್ಟು ಮೌಲ್ಯ ₹31.14 ಲಕ್ಷ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.