ADVERTISEMENT

ದೇವನಹಳ್ಳಿ: ಕೆಂಪೇಗೌಡ ಅಂ.ರಾ ವಿಮಾನ ನಿಲ್ದಾಣದ ರನ್ ವೇಗೆ ನುಗ್ಗಿದ ನಾಯಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 21:01 IST
Last Updated 3 ಫೆಬ್ರುವರಿ 2026, 21:01 IST
<div class="paragraphs"><p>ದೇವನಹಳ್ಳಿಯ ವಿಮಾನ ನಿಲ್ದಾಣದ ಟರ್ಮಿನಲ್‌ 2ರ ರನ್‌ ವೇಗೆ ನಾಯಿ ನುಗ್ಗಿರುವ ದೃಶ್ಯ</p></div>

ದೇವನಹಳ್ಳಿಯ ವಿಮಾನ ನಿಲ್ದಾಣದ ಟರ್ಮಿನಲ್‌ 2ರ ರನ್‌ ವೇಗೆ ನಾಯಿ ನುಗ್ಗಿರುವ ದೃಶ್ಯ

   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2 ಹೊಸ ರನ್‌ ವೇಗೆ ಅಡ್ಡಲಾಗಿ ಸೋಮವಾರ ಬೀದಿನಾಯಿಯೊಂದು ನುಗ್ಗಿದೆ.

ಬೀದಿನಾಯಿಯೊಂದು ಏಕಾಏಕಿ ರನ್‌ ವೇಗೆ ನುಗ್ಗಿತು. ಈ ವೇಳೆ ರನ್‌ವೇಯಲ್ಲಿ ಯಾವುದೇ ವಿಮಾನಗಳು ಇರಲಿಲ್ಲ. ಇದರಿಂದ ಕೆಲ ಸಮಯ ಆತಂಕ ಉಂಟಾಯಿತು. ತಕ್ಷಣ ಭದ್ರತಾ ಸಿಬ್ಬಂದಿ ನಾಯಿ ಹಿಡಿದು ಪರಿಸ್ಥಿತಿ ನಿಯಂತ್ರಿಸಿದರು.

ADVERTISEMENT

ವಿಮಾನ ನಿಲ್ದಾಣ ಹಾಗೂ ರನ್‌ವೇ ಸಮೀಪ ಬೀದಿನಾಯಿಗಳು ಓಡಾಡುತ್ತಿರುವುದು ಈಚೆಗೆ ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.