ADVERTISEMENT

ವಿಜಯಪುರ: ಬಮೂಲ್ ಸೌಲಭ್ಯದ ಪ್ರಯೋಜನ ಪಡೆಯಿರಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 14:00 IST
Last Updated 11 ಜನವರಿ 2020, 14:00 IST
ಚನ್ನರಾಯಪಟ್ಟಣ ಹೋಬಳಿ ಸೋಮತ್ತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿ ನೀಡಿದ್ದ ಬಮೂಲ್ ನಿರ್ದೇಶಕ ಮಂಜುನಾಥ್ ಅವರು ಡೇರಿಗೆ ಕ್ಯಾಲೆಂಡರ್ ಹಾಗೂ ಬಮೂಲ್‌ನಿಂದ ಸಿಗುವ ಸೌಲಭ್ಯಗಳ ಮಾಹಿತಿಯುಳ್ಳ ಪುಸ್ತಕ ವಿತರಣೆ ಮಾಡಿದರು
ಚನ್ನರಾಯಪಟ್ಟಣ ಹೋಬಳಿ ಸೋಮತ್ತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿ ನೀಡಿದ್ದ ಬಮೂಲ್ ನಿರ್ದೇಶಕ ಮಂಜುನಾಥ್ ಅವರು ಡೇರಿಗೆ ಕ್ಯಾಲೆಂಡರ್ ಹಾಗೂ ಬಮೂಲ್‌ನಿಂದ ಸಿಗುವ ಸೌಲಭ್ಯಗಳ ಮಾಹಿತಿಯುಳ್ಳ ಪುಸ್ತಕ ವಿತರಣೆ ಮಾಡಿದರು   

ವಿಜಯಪುರ: ಬಮೂಲ್‌ನಿಂದ ರೈತರಿಗಾಗಿ ಇರುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಬಮೂಲ್ ನಿರ್ದೇಶಕ ಮಂಜುನಾಥ್ ಹೇಳಿದರು.

ಚನ್ನರಾಯಪಟ್ಟಣ ಸೋಮತ್ತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿ ನೀಡಿದ್ದ ಅವರು, ಡೇರಿಗೆ ವರ್ಷದ ಕ್ಯಾಲೆಂಡರ್ ಹಾಗೂ ಬಮೂಲ್ ಕಾರ್ಯಕ್ರಮಗಳುಳ್ಳ ಮಾಹಿತಿ ಪುಸ್ತಕ ವಿತರಿಸಿ ಮಾತನಾಡಿದರು.

ಬಮೂಲ್‌ನಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಒಂದು ಯಂತ್ರಕ್ಕೆ ₹11,700, ಅಜೋಲಾ 2 ಬ್ಯಾಗ್‌ಗೆ ಒಂದು ಸಾವಿರ ರೂಪಾಯಿ, ರಾಸುಗಳಿಗೆ ಮ್ಯಾಟ್ ಒಂದನ್ನು ₹2,275ಕ್ಕೆ ನೀಡಲಾಗುತ್ತಿದೆ. ಈ ಸೌಲಭ್ಯಗಳನ್ನು ಪಡೆಯಲು ಚನ್ನರಾಯಪಟ್ಟಣ ಹೋಬಳಿ ನಲ್ಲೂರು, ಗಂಗವಾರ ಚೌಡಪ್ಪನಹಳ್ಳಿ, ಬೂದಿಗೆರೆ ಗ್ರಾಮ ಪಂಚಾಯಿತಿಗಳಿಗೆ ಸೇರುವ ಹಾಲು ಉತ್ಪಾದಕರ ಸಹಕಾರ ಸಂಘದವರು ಬೆಂಗಳೂರು ಪೂರ್ವ ತಾಲ್ಲೂಕಿನ ಬಮೂಲ್ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಒದಗಿಸಿ ಪಡೆಯಬಹುದಾಗಿದೆ ಎಂದರು.

ADVERTISEMENT

ರೈತರ ಅಭಿವೃದ್ಧಿಗೆ ಪೂರಕವಾದ ಸಾಕಷ್ಟು ಸೌಲಭ್ಯಗಳನ್ನು ಸಹಕಾರಿ ಸಂಘಗಳ ಮುಖಾಂತರ ಪಡೆದುಕೊಳ್ಳಬಹುದು. ಈ ಬಗ್ಗೆ ಎಲ್ಲ ಹಾಲು ಉತ್ಪಾದಕರಿಗೆ ಮಾಹಿತಿ ಒದಗಿಸಬೇಕು ಎಂದರು. ಸೋಮತ್ತನಹಳ್ಳಿ ಡೇರಿ ಮುಖಂಡ ಗಂಗಾಧರ್, ಒಕ್ಕೂಟದ ಉಪವ್ಯವಸ್ಥಾಪಕ ಡಾ.ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.