ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ 2024-25ನೇ ಸಾಲಿನಲ್ಲಿ ₹46.34 ಲಕ್ಷ ಲಾಭಗಳಿಸಿದೆ.
ನಗರದ ಒಕ್ಕಲಿಗರ ಸಂಘದಲ್ಲಿ ಗುರುವಾರ ನಡೆದ ಸದಸ್ಯರ ವಾರ್ಷಿಕ ಸಭೆಯಲ್ಲಿ ಲೆಕ್ಕಪತ್ರ ಮಂಡಿಸಿ ಮಾತನಾಡಿದ ಪ್ರಭಾರ ಕಾರ್ಯದರ್ಶಿ ಕೆ.ಆನಂದ, ರಸಗೊಬ್ಬರವನ್ನು ಮಾರಾಟ ಮಾಡುವಲ್ಲಿ ಇಡೀ ಜಿಲ್ಲೆಯಲ್ಲೇ ಸಂಘವು ಪ್ರಥಮ ಸ್ಥಾನದಲ್ಲಿದೆ ಎಂದರು.
ನಗರದಲ್ಲಿ ಐದು ಜನತಾ ಬಜಾರ್ ಶಾಖೆ ತೆರೆಯಲಾಗಿದೆ. ಶೇ10ರಷ್ಟು ರಿಯಾಯಿತಿ ದರದಲ್ಲಿ ಔಷಧಿ ಮಾರಾಟ ಮಾಡಲಾಗುತ್ತಿದೆ. ಕಡಿಮೆ ಬಡ್ಡಿದರದಲ್ಲಿ ರೈತರಿಗೆ ಆಭರಣ ಸಾಲ ನೀಡಲಾಗುತ್ತಿದೆ ಎಂದು ನಿರ್ದೇಶಕರಾದ ವಿ.ಆಂಜನೇಗೌಡ, ಎನ್.ರಂಗಪ್ಪ, ಚುಂಚೇಗೌಡ ಹೇಳಿದರು.
ಸಂಘದ ಸದಸ್ಯರ ಹಾಗೂ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ನಡೆಯಿತು. ಸಂಘದ ಅಧ್ಯಕ್ಷ ಎಂ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆ.ಸಿ.ಲಕ್ಷ್ಮೀನಾರಾಯಣ್, ನಿರ್ದೇಶಕರಾದ ಜಿ.ಮಾರೇಗೌಡ, ಡಿ.ಸಿದ್ದರಾಮಯ್ಯ, ಚಂದ್ರಕಲಾ, ಎಂ.ಗೋವಿಂದರಾಜು, ಎಸ್.ದಯಾನಂದ, ಲಕ್ಷ್ಮೀ, ಎಂ.ಆನಂದ, ಎ.ರಾಮಾಂಜಿನಪ್ಪ, ಎ.ಎನ್.ಹರೀಶ್‌ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.