ADVERTISEMENT

ಬಾಗೇಪಲ್ಲಿ | ತಾಪಮಾನ ಏರಿಕೆ: ಪಟ್ಟಣ ಭಣಭಣ

ಪಿ.ಎಸ್.ರಾಜೇಶ್
Published 28 ಏಪ್ರಿಲ್ 2025, 7:45 IST
Last Updated 28 ಏಪ್ರಿಲ್ 2025, 7:45 IST
ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಬಿಸಿಲಿನ ತಾಪಮಾನದಿಂದ ಜನರ ಹಾಗೂ ವಾಹನಗಳ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿರುವುದು
ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಬಿಸಿಲಿನ ತಾಪಮಾನದಿಂದ ಜನರ ಹಾಗೂ ವಾಹನಗಳ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿರುವುದು   

ಬಾಗೇಪಲ್ಲಿ: ಪಟ್ಟಣದಲ್ಲಿ ಬೇಸಿಗೆ ಬಿಸಿಲು 33 ಡಿಗ್ರಿಯಷ್ಟು ದಾಖಲಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸುಡುಬಿಸಿಲು, ಸೆಕೆಗೆ ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಪಟ್ಟಣದ ಬಿಕೋ ಎನ್ನುತ್ತಿದೆ ಪಟ್ಟಣ. ಡಿವಿಜಿ ಮುಖ್ಯರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಜನರು ಹಾಗೂ ದ್ವಿಚಕ್ರ ವಾಹನ ಓಡಾಟ ಇಲ್ಲದೆ ಭಣಗುಟ್ಟುತ್ತಿದೆ.

ಪಟ್ಟಣದ ಡಿವಿಜಿ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಗಿಡ, ಮರಗಳ ನೆರಳು ಇಲ್ಲ. ಮುಖ್ಯರಸ್ತೆ ವಿಸ್ತರಣೆ ಸಂಧರ್ಭದಲ್ಲಿ ಬೃಹದಾಕಾರ ಮರಗಳನ್ನು ಕಡಿಯಲಾಗಿದೆ. ನಂತರ 20 ವರ್ಷಗಳು ಕಳೆದರೂ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಪುರಸಭೆ, ಲೋಕೊಪಯೋಗಿ, ಅರಣ್ಯ ಇಲಾಖೆಗಳು ಗಿಡ, ಮರಗಳು ಬೆಳಿಸಿಲ್ಲ. ಇದರಿಂದ ನೆರಳಿನ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಹೈರಾಣಾಗಿದ್ದಾರೆ.

ಬಸ್ ನಿಲ್ದಾಣ ಮುಂಭಾಗ, ಚಿತ್ರಾವತಿ ಹೋರಾಟ ವೃತ್ತ, ಕುಂಬಾರಪೇಟೆ ವೃತ್ತ, ಹಳೇ ಕೆನೆರಾ ಬ್ಯಾಂಕ್ ವೃತ್ತ, ಡಾ.ಎಚ್.ಎನ್.ವೃತ್ತ ಹಾಗೂ ನ್ಯಾಷನಲ್ ಕಾಲೇಜಿನ ಮುಂಭಾದ ವೃತ್ತಗಳಲ್ಲಿ ತಂಗುದಾಣ ಮಾಡಿಲ್ಲ. ಪ್ರಯಾಣಿಕರು ಬಿಸಿಲಿನಲ್ಲಿ ಗಂಟೆಗಟ್ಟಲೇ ಕಾಯಬೇಕಾಗಿದೆ.

ADVERTISEMENT

ಪುರಸಭೆಯಿಂದ  ಮಡಿಕೆ ನೀರಿನ ವ್ಯವಸ್ಥೆ ಮಾಡಿಲ್ಲ. ಇದರಿಂದ ರಸ್ತೆಯಲ್ಲಿ ಸಂಚರಿಸುವವರಿಗೆ, ದ್ವಿಚಕ್ರ ವಾಹನಗಳ, ಆಟೊ, ಕಾರು ಚಾಲಕರಿಗೆ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ.

ಪಟ್ಟಣದ ಮುಖ್ಯರಸ್ತೆಯಲ್ಲಿ ಕುಡಿಯುವ ನೀರು ಸಿಗದೇ ಪ್ರಯಾಣಿಕರು, ಬೀದಿಬದಿ ವ್ಯಾಪಾರಸ್ಥರು ನೆರಳಿನ ರಕ್ಷಣೆ ಇಲ್ಲದೇ ಪರದಾಡುತ್ತಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರಿಗೂ ಸುಡುಬಿಸಿಲು, ಸೆಕೆ ಹೆಚ್ಚಾಗಿದೆ. ಬಿಸಿಲಿನ ತಾಪಮಾನದಿಂದ ಪಟ್ಟಣದ ಜನರು, ವ್ಯಾಪಾರಸ್ಥರು, ಪ್ರಯಾಣಿಕರು ರಸ್ತೆಯಲ್ಲಿ ಸಂಚರಿಸುತ್ತಿಲ್ಲ. ದ್ಚಿಚಕ್ರ ವಾಹನಗಳ ಸವಾರರು ಬಿಸಿಲಿನಲ್ಲಿ ಓಡಡಾಲು ಆಗುತ್ತಿಲ್ಲ. ಬೆಳಗ್ಗೆ, ಸಂಜೆ ಮಹಿಳೆಯರು ಹಾಗೂ ವ್ಯಾಪಾರಸ್ಥರು ತರಕಾರಿ, ದಿನಸಿ, ಅಗತ್ಯ ವಸ್ತುಗಳು ಖರೀದಿ ಮಾಡಲು ರಸ್ತೆಗೆ ಬರುತ್ತಿದ್ದಾರೆ. ಇದರಿಂದ ಮುಖ್ಯರಸ್ತೆಯಲ್ಲಿ ಜನಜಂಗುಳಿ ಹೆಚ್ಚಾಗಿದೆ.

ಮಧ್ಯಾಹ್ನದ ವೇಳೆಯಲ್ಲಿ ಬಿಸಿಲಿನ ತಾಪಮಾನದಿಂದ ಮುಖ್ಯರಸ್ತೆ ಬೀದಿಗಳಲ್ಲಿ ಜನರು ಬಿಸಿಲಿಗೆ ಹೊರ ಬರಲು ಆಗಿಲ್ಲ. ಇದರಿಂದ ರಸ್ತೆಗಳು ಬಿಕೋ ಎನ್ನುತ್ತಿವೆ. ಸ್ವಯಂ ಘೋಷಿತ ಸಂಚಾರ ಬಂದ್ ಆಗಿದೆ.
ಚನ್ನರಾಯಪ್ಪ ಹಿರಿಯ ನಾಗರಿಕ
ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಮತ್ತು ಆಡಳಿತ ಮಂಡಳಿ ಜೊತೆ ಚರ್ಚಿಸಿ ನೀರು ನೆರಳು ಶೌಚಾಲಯ ತಂಗುದಾಣ ನಿರ್ಮಿಸಲು ಕ್ರಮ ಜರುಗಿಸಲಾಗುವುದು
ಎಂ.ಶ್ರೀನಿವಾಸ್ ಪುರಸಭೆ ಮುಖ್ಯಾಧಿಕಾರಿ

ವ್ಯಾಪಾರಕ್ಕೆ ಭಾರಿ ಹೊಡೆತ

ಬಿಸಿಲಿನ ಪ್ರಖರಕ್ಕೆ ಬೀದಿ ವ್ಯಾಪಾರಸ್ಥರು ಹೈರಾಣಾಗಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಸಣ್ಣ ಮಟ್ಟದ ಛತ್ರಿಗಳು ಹಾಕಿ ನೆರಳು ಪಡೆಯುತ್ತಿದ್ದಾರೆ. ಬಿಸಿಲಿನ ತಾಪಮಾನದ ಸೆಕೆಯಿಂದ ನಿತ್ರಾಣರಾಗಿದ್ದಾರೆ. ಮಧ್ಯಾಹ್ನದ ವೇಳೆಯಲ್ಲಿ ಜನರು ವ್ಯಾಪಾರಸ್ಥರು ಹೊರೆಗೆ ಬರುತ್ತಿಲ್ಲ. ಇದರಿಂದ ಈ ವೇಳೆಯಲ್ಲಿ ವ್ಯಾಪಾರ ವಹಿವಾಟು ನಡೆಯದೇ ವ್ಯಾಪಾರಕ್ಕೆ ಭಾರಿ ಹೊಡೆತ ಆಗಿದೆ ಎಂದು ಪಟ್ಟಣದ ಬೀದಿಬದಿ ವ್ಯಾಪಾರಿ ಮಂಜುನಾಥ್ ತಿಳಿಸಿದ್ದಾರೆ.

ಕನಿಷ್ಠ ಸೌಲಭ್ಯ ಕಲ್ಪಿಸಿ

ತಾಲ್ಲೂಕು ಕೇಂದ್ರದಲ್ಲಿ ಕುಡಿಯುವ ನೀರು ನೆರಳು ಶೌಚಾಲಯ ತಂಗುದಾಣ ಕಲ್ಪಿಸುವುದು ಸ್ಥಳೀಯ ಸಂಸ್ಥೆ ಜವಾಬ್ದಾರಿ. ಆದರೆ ಪಟ್ಟಣದ ಮುಖ್ಯರಸ್ತೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಆದರೂ ಪುರಸಭೆ ಅಧಿಕಾರಿಗಳು ಆಡಳಿತ ಮಂಡಲಿಯವರು ಕನಿಷ್ಠ ಸೌಲಭ್ಯ ಮಾಡಿಲ್ಲ ಎಂದು ಸ್ಥಳೀಯ ನಿವಾಸಿ ನಿರ್ಮಲಮ್ಮ ಬೇಸರ ವ್ಯಕ್ತಪಡಿಸಿದರು. ಸರ್ಕಾರಿ ಬಸ್ ನಿಲ್ದಾಣದ ಕುಂಬಾರಪೇಟೆ ಡಾ.ಎಚ್.ಎನ್.ವೃತ್ತಗಳಲ್ಲಿ ಮಡಿಕೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ತಾತ್ಕಾಲಿಕವಾಗಿ ಶೆಡ್ ಮಾಡಬೇಕು. ಪುರಸಭೆ ಖಾಲಿ ಜಾಗಾಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಸ್ಥಳೀಯ ನಿವಾಸಿ ಮಂಜುನಾಥರೆಡ್ಡಿ ಒತ್ತಾಯಿಸಿದರು. ಹಸಿರೀಕರಣಕ್ಕೆ ಒತ್ತು ನೀಡಿ ಪಟ್ಟಣದ ಡಿವಿಜಿ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಜಾಗ ಸಸಿ–ಗಿಡ ನೆಡಬೇಕು. ಗಿಡ ಮರಗಳನ್ನು ಉಳಿಸಿ ಬೆಳಿಸಲು ಅಧಿಕಾರಿಗಳು ಕ್ರಮ ಜರುಗಿಸಬೇಕು. ಪಟ್ಟಣದ ಹಸಿರೀಕರಣಕ್ಕೆ ಒತ್ತು ನೀಡಬೇಕು ಎಂದು ಗ್ರೀನ್ ಇಂಡಿಯಾ ಫೋರಂ ಅಧ್ಯಕ್ಷ ಸೈಯ್ಯದ್ ಸಿದ್ದಿಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.