ADVERTISEMENT

11 ವರ್ಷ ಬಳಿಕ ದೊಡ್ಡ ದ್ಯಾವರ ಜಾತ್ರೆ; ಮೂರು ದಿನ ಮಹೋತ್ಸವ: ಸಚಿವ ಬೈರತಿ ಬಸವರಾಜು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 2:32 IST
Last Updated 7 ಡಿಸೆಂಬರ್ 2025, 2:32 IST
ಹೊಸಕೋಟೆ ತಾಲ್ಲೂಕಿನ ತಾವರೆಕೆರೆ ರಾಮೇಶ್ವರ ಸ್ವಾಮಿ ದೇವಾಲಯದಲ್ಲಿ ದೊಡ್ಡ ದ್ಯಾವರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಯಿತು
ಹೊಸಕೋಟೆ ತಾಲ್ಲೂಕಿನ ತಾವರೆಕೆರೆ ರಾಮೇಶ್ವರ ಸ್ವಾಮಿ ದೇವಾಲಯದಲ್ಲಿ ದೊಡ್ಡ ದ್ಯಾವರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಯಿತು   

ತಾವರೆಕೆರೆ(ಹೊಸಕೋಟೆ): ರಾಮೇಶ್ವರ ಸ್ವಾಮಿ ಹಾಗೂ ಸಿದ್ದೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವ ಮುಂದಿನ ವರ್ಷ ಏಪ್ರೀಲ್ ತಿಂಗಳಿನಲ್ಲಿ ನಡೆಸಲು ಎಲ್ಲಾ ಕುಲಸ್ಥರು ಹಾಗೂ ಕಂಬಿ ಯಜಮಾನರು ತೀರ್ಮಾನಿಸಿದ್ದಾರೆ.

ದೊಡ್ಡ ದ್ಯಾವರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವ ಭೈರತಿ ಸುರೇಶ್, ಬಿದರಹಳ್ಳಿ, ವಾಗಟ, ಅಪ್ಪಸಂದ್ರ, ತಾವರೆಕೆರೆ ಹಾಗೂ ಬಾಣಮಾಕನಹಳ್ಳಿ ಗ್ರಾಮಗಳ ದೊಡ್ಡ ದೇವರ ಜಾತ್ರಾ ಮಹೋತ್ಸವ 11 ವರ್ಷಗಳ ನಂತರ ನಡೆಯಲಿದೆ. ಐದು ದೇವರ ಜಾತ್ರೆಗೆ ದಿನಾಂಕ ನಿಗದಿಪಡಿಸಲಾಗಿದ. ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. 5 ಅಥವಾ 10 ವರ್ಷಕ್ಕೊಮ್ಮೆ ನಡೆಯುವ ದೊಡ್ಡ ದೇವರ ಜಾತ್ರಾ ಮಹೋತ್ಸವದಲ್ಲಿ ಎಲ್ಲಾ ಕಂಬಿ ಯಜಮಾನರು ಕುಲಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜ್, ಐದು ದೇವಾಲಯಗಳಲ್ಲಿ ತಾವರೆಕೆರೆ ರಾಮೇಶ್ವರ ಸ್ವಾಮಿ, ಸಿದ್ದೇಶ್ವರ ಸ್ವಾಮಿ ದೇಗುಲ ಮುಖ್ಯವಾಗಿದ್ದು, ‌ಅಲ್ಲಿ ದೊಡ್ಡ ಜಾತ್ರಾ ಮಹೋತ್ಸವ ಹಾಗೂ ಬಾಣಮಾನಕಹಳ್ಳಿಯ ವದಲಿರಾಮೇದೇವರ ಜಾತ್ರಾ ಮಹೋತ್ಸವ ಏ.4 ರಂದು ಕೂಟವ ದ್ಯಾವರ ಮೂಲಕ ಆರಂಭವಾಗಲಿದೆ. ಏ.5 ಹೊಳೆ ದ್ಯಾವರು, ಏ.6 ದೀಪಾಲಂಕಾರ ಮೂಲಕ ಅದ್ದೂರಿ ಜಾತ್ರಾ ಮಹೋತ್ಸವ ನಡೆಯಲಿದೆ.

ADVERTISEMENT

ಅದರಂತೆ ಬಿದರಹಳ್ಳಿ ಭತ್ತೇದೇವರ ಜಾತ್ರಾ ಮಹೋತ್ಸವ ಮಾ.23, ವಾಗಟ ರಾಮೇಶ್ವರ ದೇವರ ಜಾತ್ರಾ ಮಹೋತ್ಸವ ಮಾ. 26, ಅಪ್ಪಸಂದ್ರ ಭತ್ತೇದೇವರ ಜಾತ್ರಾ ಮಹೋತ್ಸವ ಮಾ.28 ರಂದು ನಡೆಯಲಿದ್ದು. ಕೊನೆಯದಾಗಿ ಎಲ್ಲಾ ದೇವಾಲಯಗಳ ಒಕ್ಕೂಟದಿಂದ ಏ. 4 ರಂದು ತಾರೆಕೆರೆಯಲ್ಲಿ ದೊಡ್ಡ ದ್ಯಾವರ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಐದು ದೇವಾಲಯಗಳ ಒಕ್ಕೂಟ ಅಧ್ಯಕ್ಷರು, ಕಂಬಿ ಯಜಮಾನರು ಹಾಗೂ ಕುಲಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.