ADVERTISEMENT

ಬನ್ನೇರುಘಟ್ಟ ಸಮೀಪ ಕಾಡಾನೆ ಸಾವು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 2:20 IST
Last Updated 2 ಡಿಸೆಂಬರ್ 2020, 2:20 IST
ಆನೇಕಲ್ ತಾಲ್ಲೂಕಿನ ಕಾಳೇಶ್ವರಿ ಗೇಟ್‌ನಲ್ಲಿ ಮೃತಪಟ್ಟಿರುವ ಕಾಡಾನೆ
ಆನೇಕಲ್ ತಾಲ್ಲೂಕಿನ ಕಾಳೇಶ್ವರಿ ಗೇಟ್‌ನಲ್ಲಿ ಮೃತಪಟ್ಟಿರುವ ಕಾಡಾನೆ   

ಆನೇಕಲ್ : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಾಳೇಶ್ವರಿ ಗೇಟ್‌ ಬಳಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.

ಸುಮಾರು 6-8ವರ್ಷದ ಸಲಗ ಇದಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ವೈದ್ಯರು ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಿದರು. ಸಣ್ಣ ಕರುಳು ಮತ್ತು ದೊಡ್ಡ ಕರುಳು ಸೋಂಕು ಅಥವಾ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್‌.ಎನ್‌.ಮೂರ್ತಿ ತಿಳಿಸಿದ್ದಾರೆ.

ಆನೆ ಮೃತ ದೇಹದ ಮೇಲೆ ಯಾವುದೇ ಗಾಯಗಳ ಗುರುತಾಗಲಿ ಅಥವಾ ವಿದ್ಯುತ್‌ ಸ್ಪರ್ಶವಾಗಿರುವ ಕುರುಹುಗಳಿಲ್ಲ. ಹಾಗಾಗಿ ಸ್ವಾಭಾವಿಕವಾಗಿ ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.