ADVERTISEMENT

ಗಂಧದ ಮರ ಕಳ್ಳತನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 14:13 IST
Last Updated 31 ಡಿಸೆಂಬರ್ 2019, 14:13 IST
ಕಳ್ಳರು ಕಡಿದಿರುವ ಗಂಧದ ಮರ
ಕಳ್ಳರು ಕಡಿದಿರುವ ಗಂಧದ ಮರ   

ದೇವನಹಳ್ಳಿ: ಇಲ್ಲಿನ ಒಂದನೇ ವಾರ್ಡ್‌ನ ಪ್ರಸನ್ನಹಳ್ಳಿ ಬಡಾವಣೆಯಲ್ಲಿ ಶ್ರೀಗಂಧದಮರ ಕಡಿದು ಕದ್ದೊಯ್ಯಲಾಗಿದೆ.

‘ಸೋಮವಾರ ರಾತ್ರಿ ಮೂರು ಗಂಟೆ ಸಮಯದಲ್ಲಿ ನಾಯಿ ಬೊಗಳಿದಾಗ ಎಚ್ಚರವಾಯಿತು. ಹೊರಬಂದು ನೋಡಿದಾಗ12ರಿಂದ 14 ಅಡಿ ಉದ್ದದ ಗಂಧದ ಮರದ ತುಂಡನ್ನು ಬುಡ ಸಮೇತ ಕೊಯ್ದು ಒಯ್ದಿದ್ದಾರೆ.ಸ್ಥಳದಲ್ಲೇ ಗರಗಸ ಬಿಟ್ಟು ಪರಾರಿಯಾಗಿದ್ದಾರೆ’ ಎಂದುಮನೆ ಮಾಲೀಕ ಪ್ರಸನ್ನಹಳ್ಳಿ ನಟರಾಜ್ ತಿಳಿಸಿದರು.

‘15 ವರ್ಷಗಳಿಂದ ಶ್ರೀಗಂಧದಮರ ಬೆಳೆಸಿದ್ದೆವು. ಹತ್ತು ವರ್ಷದಲ್ಲಿ ಬಡಾವಣೆ ನಿರೀಕ್ಷೆಗಿಂತ ಹೆಚ್ಚು ಬೆಳೆವಣಿಗೆಯಾಗಿದೆ. ಮನೆಯ ನಾಲ್ಕು ದಿಕ್ಕಿನಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸುವ ಚಿಂತನೆ ಇತ್ತು. ಇನ್ನೆರಡು ದಿನಗಳಲ್ಲಿ ಅಳವಡಿಸುತ್ತಿದ್ದೆವು. ಅಷ್ಟರಲ್ಲೆ ಕಳ್ಳರು ಮರ ಕದ್ದಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ನಗರ ಪೊಲೀಸ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಪರೀಶಿಲನೆ ನಡೆಸಿದ್ದಾರೆ. ಅರಣ್ಯ ಇಲಾಖೆಯವರು ಬಂದಿಲ್ಲ. ಗಂಧದ ಮರಗಳನ್ನು ಹೊಲಗಳಲ್ಲಿ, ಜಮೀನಿನ ಬದುಗಳಲ್ಲಿ ಬೆಳೆಸಿ. ಪ್ರೋತ್ಸಾಹ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತದೆ. ಮನೆ ಮುಂದಿನ ಮರಗಳ ಪಾಡು ಈ ರೀತಿಯಾದರೆ, ಹೊಲಗಳಲ್ಲಿ ಬೆಳೆದ ಮರಗಳು ಕಳ್ಳರಿಗೆ ಯಾವ ಲೆಕ್ಕ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.