
ಆನೇಕಲ್: ತಾಲ್ಲೂಕಿನ ತಿಂಡ್ಲು ಗ್ರಾಮದ ಶ್ರೀನಿವಾಸಯ್ಯ ಮತ್ತು ಭೈರೇಗೌಡರ ಕುಟುಂಬ 30 ಎಕರೆಯಲ್ಲಿ ಬೆಳೆದ 350 ಕ್ವಿಂಟಲ್ ರಾಗಿ ರಾಶಿಗೆ ಭಾನುವಾರ ಸುಗ್ಗಿ ಪೂಜೆ ಸಂಭ್ರಮದಿಂದ ನಡೆಯಿತು.
ವಿವಿಧ ಹೂಗಳಿಂದ ಅಲಂಕರಿಸಿದ್ದ ರಾಗಿ ರಾಶಿಯ ಸುತ್ತಲೂ ಬಣ್ಣ ಬಣ್ಣದ ರಂಗೋಲಿ ಹಾಕಲಾಗಿತ್ತು. ಹಳ್ಳಿಕಾರ್ ಎತ್ತುಗಳಿಗೆ ಅಲಂಕಾರ ಮಾಡಲಾಗಿತ್ತು. ಮಹಿಳೆಯರು ಆಕರ್ಷಕ ಕೋಲಾಟ ಪ್ರದರ್ಶಿಸಿದರು. ಮುಗಳೂರು ಮತ್ತು ಸರ್ಜಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರು ಪೂಜೆಗೆ ಸಾಕ್ಷಿಯಾದರು.
ಇತ್ತೀಚಿನ ದಿನಗಳಲ್ಲಿ 50-60 ಕ್ವಿಂಟಾಲ್ ರಾಗಿ ಬೆಳೆಯುವುದೇ ಸವಾಲಿನ ಕೆಲಸವಾಗಿದೆ. 30 ಎಕರೆ ಜಮೀನಿನಲ್ಲಿ 350ಕ್ಕೂ ಹೆಚ್ಚು ಕ್ವಿಂಟಾಲ್ ರಾಗಿ ಬೆಳೆದಿದ್ದು, ಆರರಿಂದ ಏಳು ಅಡಿ ಎತ್ತರದ ರಾಗಿ ರಾಶಿ ನೋಡುವುದೇ ಒಂದು ಆನಂದ ಎಂದು ಪ್ರಗತಿಪರ ರೈತ ತಿಂಡ್ಲು ಭೈರೇಗೌಡ, ರೈತ ಮಹಿಳೆ ಶ್ವೇತಾ ಕಾರ್ತೀಕ್ ಅನುಭವ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.