ಹೊಸಕೋಟೆ: ‘ಸಾರ್ವಜನಿಕರು ಕೊರೊನಾ ನಿರ್ಮೂಲನೆಗಾಗಿ ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಲಸಿಕೆ ಪಡೆಯುವುದನ್ನು ತಪ್ಪಿಸಲು ಟ್ರಸ್ಟ್ ವತಿಯಿಂದ ಲಸಿಕೆ ಹಾಕಿಸ
ಲಾಗುತ್ತಿದೆ’ ಎಂದು ಎಲ್.ಜಿ. ಟ್ರಸ್ಟ್ ಅಧ್ಯಕ್ಷ ಲಕ್ಷಣ್ ಗೌಡ ತಿಳಿಸಿದರು.
ನಗರದ ಎಂ.ವಿ. ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ವಿ. ಸುರೇಶ್, ಸೋಲಾರ್ ಮಂಜುನಾಥ್, ಆರ್‌ಟಿಸಿ ಗೋವಿಂದರಾಜು, ರಮೇಶ್, ಸಿಕಂದರ್, ಮುಖ್ಯಶಿಕ್ಷಕ ಶಿವಶಂಕರ್ ಶಾಸ್ತ್ರಿ, ಶಿಕ್ಷಕರಾದ ಆಂಜಿನಪ್ಪ, ರಾಜಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.