ADVERTISEMENT

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವರಮಹಾಲಕ್ಷ್ಮೀ ಪೂಜೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 14:02 IST
Last Updated 2 ಸೆಪ್ಟೆಂಬರ್ 2018, 14:02 IST
ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಪ್ರಧಾನ ಆಗಮೀಕ ಎಚ್.ಎಸ್. ಲೋಕನಾಥಾಚಾರ್ಯ ಪ್ರವಚನ ನೀಡಿದರು
ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಪ್ರಧಾನ ಆಗಮೀಕ ಎಚ್.ಎಸ್. ಲೋಕನಾಥಾಚಾರ್ಯ ಪ್ರವಚನ ನೀಡಿದರು   

ವಿಜಯಪುರ: ಲೋಕಕಲ್ಯಾಣಾರ್ಥವಾಗಿ ಇಲ್ಲಿನ ಬಲಿಜ ಭವನದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಾಮೂಹಿಕ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾಮೂಹಿಕ ವರಮಹಾಲಕ್ಷ್ಮೀ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ 150ಕ್ಕೂ ಹೆಚ್ಚು ಮಹಿಳೆಯರು, ಕೈಯಲ್ಲಿ ಅರಿಶಿನ ಕುಂಕುಮ, ಪೂಜಾ ಸಾಮಾಗ್ರಿಗಳು, ನೈವೇದ್ಯ ಪದಾರ್ಥಗಳನ್ನು ಹಿಡಿದು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಪ್ರಧಾನ ಆಗಮೀಕ ಎಚ್.ಎಸ್. ಲೋಕನಾಥಾಚಾರ್ಯ ವರಮಹಾಲಕ್ಷ್ಮೀ ಪೂಜಾ ವ್ರತದ ವಿಧಿವಿಧಾನಗಳ ಕುರಿತು ಪ್ರವಚನ ನೀಡಿದರು.

ADVERTISEMENT

ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಅಕ್ಷತಾ ರೈ ಮಾತನಾಡಿ, ಮಹಿಳೆ ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಂಡು ಪುರುಷರಂತೆ ಎಲ್ಲ ರಂಗಳಲ್ಲೂ ಪ್ರಾಬಲ್ಯ ಸಾಧಿಸಬಳ್ಳಲು.ಇದನ್ನು ಸಾಬೀತು ಪಡಿಸುವ ಅವಕಾಶಗಳಿದ್ದರೂ ಕೆಲವರು ಸದ್ಭಳಕೆ ಮಾಡಿಕೊಳ್ಳುತ್ತಿಲ್ಲ. ಆದ್ದರಿಂದ ಮಹಿಳೆಯರನ್ನು ಒಟ್ಟುಗೂಡಿಸಿ ಅವರನ್ನು ಸಬಲರನ್ನಾಗಿ ಮಾಡುವ ಉದ್ದೇಶದಿಂದ ಯೋಜನೆಯ ಮೂಲಕ ಇಂತಹ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.

ವಿಜಯಪುರ ವಲಯದ ಮೇಲ್ವಿಚಾರಕಿ ಮನೋರಮಾ ಮಾತನಾಡಿ, ಮಹಿಳಾ ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡು ಆರ್ಥಿಕ ಬದಲಾವಣೆಗೆ ಅತಿ ಹೆಚ್ಚು ಒತ್ತು ನೀಡಿದ್ದಾರೆ. ಇದರಿಂದ ಇಂದು ಮಹಿಳೆಯೂ ಸಮಾಜ ಆರ್ಥಿಕ ಬದಲಾವಣೆಗೆ ಸಂಪೂರ್ಣ ಕಾರಣವಾಗಿದ್ದಾಳೆ ಎಂದರು.

ವಿಜಯಪುರ ಒಕ್ಕೂಟದ ಅಧ್ಯಕ್ಷ ಶಾಹೀದಾ ಬಿ. ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೆಲಸ ಶ್ಲಾಘನೀಯವಾಗಿದೆ. ಮಹಿಳೆಯರ ಸ್ವಾವಲಂಭಿ ಬದುಕಿಗೆ ಮುನ್ನುಡಿ ಬರೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಜಂಟಿ ಕಾರ್ಯದರ್ಶಿ ಆಶಾರಾಣಿ, ಕೊಶಾಧಿಕಾರಿ ದೀಪ, ಕೌಸಲ್ಯ, ಅನಿತಮ್ಮ, ಮಂಜುನಾಥ್‌. ಎಸ್‌, ಭಾಗ್ಯಲಕ್ಷ್ಮೀ ಆರ್., ಸರೋಜಮ್ಮ, ಮಂಜುಳಮ್ಮ, ಅನ್ನಪೂರ್ಣಮ್ಮ, ಬಚ್ಚಮ್ಮ, ಎ.ಎಸ್. ಸೌಮ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.