ADVERTISEMENT

ವಿಜಯಪುರ: ಸಪ್ಪಲಮ್ಮ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 8:36 IST
Last Updated 11 ಫೆಬ್ರುವರಿ 2026, 8:36 IST
ವಿಜಯಪುರ ಸಮೀಪದ ಕೊಮ್ಮಸಂದ್ರ ಗ್ರಾಮದಲ್ಲಿ ಸಪ್ಪಲಮ್ಮ ವಾರ್ಷಿಕೋತ್ಸವ ಹಾಗೂ ದೀಪೋತ್ಸವ ನಡೆಯಿತು
ವಿಜಯಪುರ ಸಮೀಪದ ಕೊಮ್ಮಸಂದ್ರ ಗ್ರಾಮದಲ್ಲಿ ಸಪ್ಪಲಮ್ಮ ವಾರ್ಷಿಕೋತ್ಸವ ಹಾಗೂ ದೀಪೋತ್ಸವ ನಡೆಯಿತು   

ವಿಜಯಪುರ (ದೇವನಹಳ್ಳಿ): ಪಟ್ಟಣ ಸಮೀಪದ ಕೊಮ್ಮಸಂದ್ರ ಗ್ರಾಮದಲ್ಲಿ ಸಪ್ಪಲಮ್ಮ ವಾರ್ಷಿಕೋತ್ಸವ ಹಾಗೂ ದೀಪೋತ್ಸವ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ಮಂಗಳವಾರ ನಡೆದವು.

ಜಾತ್ರಾ ಮಹೋತ್ಸವದ ಅಂಗವಾಗಿ ಊರಿನ ಮುಖ್ಯ ಬೀದಿಗಳಲ್ಲಿ ಗ್ರಾಮ ದೇವತೆಗಳ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಗ್ರಾಮದೇವಿ ಸಪ್ಪಲಮ್ಮಗೆ ತಂಬಿಟ್ಟು ದೀಪ ಆರತಿಗಳನ್ನು ಬೆಳಗಿದರು. ಊರಿನ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು. ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT