ADVERTISEMENT

ಅಭಿವೃದ್ಧಿ, ಮಹಿಳಾ ಸಬಲೀಕರಣಕ್ಕೆ ಮತ ನೀಡಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:43 IST
Last Updated 1 ಡಿಸೆಂಬರ್ 2019, 13:43 IST
ಸೂಲಿಬೆಲೆ ಗ್ರಾಮಸ್ಥರು, ಹೊಸಕೋಟೆ ವಿಧಾನ ಸಭಾ ಉಪ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರಿಗೆ ಹೂ ಮಾಲೆ ಹಾಕಿ ಸ್ವಾಗತಿಸಿದರು
ಸೂಲಿಬೆಲೆ ಗ್ರಾಮಸ್ಥರು, ಹೊಸಕೋಟೆ ವಿಧಾನ ಸಭಾ ಉಪ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರಿಗೆ ಹೂ ಮಾಲೆ ಹಾಕಿ ಸ್ವಾಗತಿಸಿದರು   

ಸೂಲಿಬೆಲೆ: ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 65 ವರ್ಷಗಳ ನಂತರ ಮಹಿಳೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಎಲ್ಲರೂ ಮತದಾನ ಮಾಡುವ ಮೂಲಕ ಆಶೀರ್ವಾದ ಮಾಡಿ ಮಹಿಳೆಯರ ಸಬಲೀಕರಣ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ದುಡಿಯಲು ಅವಕಾಶ ಮಾಡಿ ಕೊಡಬೇಕು ಎಂದು ಹೊಸಕೋಟೆ ಉಪ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮಾವತಿ ಸುರೇಶ್ ಮತದಾರರಲ್ಲಿ ಮನವಿ ಮಾಡಿದರು.

ಸೂಲಿಬೆಲೆ ಪಟ್ಟಣ ಹಾಗೂ ಹೋಬಳಿಯ ಹಸಿಗಾಳ, ಸೊಣ್ಣಹಳ್ಳಿಪುರ, ಕಮ್ಮಸಂದ್ರ, ಯನಗುಂಟೆ, ಸಾದಪ್ಪನಹಳ್ಳಿ, ಅತ್ತಿಬೆಲೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.

‘ನೀವು ಹಾಕುವ ಪ್ರತಿಯೊಂದು ಮತವು ಶ್ರೇಷ್ಠವಾಗಿದ್ದು, ತಾವು ಹಾಕಿದ ಮತಕ್ಕೆ ಪ್ರಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುತ್ತೇನೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಪ್ರಸಾದ್ ಮಾತನಾಡಿ, ‘ಕಳೆದ ಬಾರಿ ಹೊಸಕೋಟೆ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್ ಅವರಿಗೆ ತಾಲ್ಲೂಕಿನ ಮತದಾರರು 98 ಸಾವಿರ ಮತಗಳನ್ನು ನೀಡಿ ಜಯಶೀಲರನ್ನಾಗಿ ಮಾಡಿದ್ದರು. ಆದರೆ, ಅವರು ಕಾಂಗ್ರೆಸ್ ಪಕ್ಷ ಬಿಟ್ಟ ಓಡಿ ಹೋದರು. ನಾವು ತಾಲ್ಲೂಕಿನ ಜನ ಮನೆಯ ಯಜಮಾನನ ರೀತಿಯಲ್ಲಿ ಗೌರವ ನೀಡುತ್ತ ಬಂದಿದ್ದರು, ಆದರೆ ಮನೆಯ ಯಜಮಾನ ಮನೆ ಬಿಟ್ಟು ಓಡಿ ಹೋಗಿದ್ದಾನೆ, ಅವರ ಸ್ಥಾನವನ್ನು ತುಂಬಲು ಕಾಂಗ್ರೆಸ್ ಪಕ್ಷದಿಂದ ಪದ್ಮಾವತಿ ಸುರೇಶ್ ಅವರು ಬಂದಿದ್ದಾರೆ. ಇವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ಹಾಕಿ ಜಯಶೀಲರನ್ನಾಗಿ ಮಾಡಿ’ ಎಂದು ಕೋರಿದರು.

ಗ್ರಾಮದವರಿಂದ ಸೌಲಭ್ಯಗಳ ಕೊರತೆ ಪಟ್ಟಿ: ಸೂಲಿಬೆಲೆ ಸಮೀಪದ ಕದಿರನಪುರ/ ರಾಂಪುರ ಗ್ರಾಮದಲ್ಲಿ ಪದ್ಮಾವತಿ ಸುರೇಶ್ ಅವರು ಮತ ಯಾಚಿಸಲು ಹೋದಾಗ, ರಸ್ತೆ, ನೀರು, ನಿವೇಶನಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಗ್ರಾಮದ ಗೇಟಿನಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಹಾಗೂ ಬಸ್ ನಿಲುಗಡೆ ನೀಡುವಂತಹ ವ್ಯವಸ್ಥೆ ಮಾಡಿ ಕೊಡಲು ಒತ್ತಾಯಿಸಿದರು. ಗ್ರಾಮದ ಸರ್ಕಾರಿ ಬೋರ್‌ವೆಲ್‌ನಲ್ಲಿ ಅಳವಡಿಸಿದ್ದ ಮೋಟರ್ ಪಂಪ್‌ ಸೆಟ್ ತೆಗೆದುಕೊಂಡು ಹೋದವರು ಮತ್ತೆ ತಂದು ಹಾಕಲಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಪ್ರಸಾದ್ ಅವರಿಗೆ ದೂರು ನೀಡಿದರು.

ಪ್ರಚಾರ ಕಾರ್ಯಕ್ರಮದಲ್ಲಿ ಪದ್ಮಾವತಿ ಸುರೇಶ್ ಅವರ ಮಗ ಸಂಜಯ್, ಚೀಮಸಂದ್ರ ಮುಖಂಡ ಶಂಕರನಾರಾಯಣ, ಎಸ್.ಕೆ.ರಮೇಶ್, ಪಿ.ವಿ.ನಟರಾಜ, ರಾಮಕ್ಕನವರ ಅರುಣ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಅಮ್ಜದ್, ತಾಲ್ಲೂಕು ಪಂಚಾಯಿತಿ ಸದಸ್ಯ ಷಫಿ ಹಾಗೂ ಹೋಬಳಿ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.