ADVERTISEMENT

ದೊಡ್ಡಬಳ್ಳಾಪುರ | ನಾಡಬಾಂಬ್ ಸ್ಫೋಟ: ಮಹಿಳೆಗೆ ಗಾಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 23:49 IST
Last Updated 12 ನವೆಂಬರ್ 2025, 23:49 IST
<div class="paragraphs"><p>ಸ್ಫೋಟ</p></div>

ಸ್ಫೋಟ

   

ಸಾಸಲು (ದೊಡ್ಡಬಳ್ಳಾಪುರ): ತಾಲ್ಲೂಕಿನ ಗುಮ್ಮನಹಳ್ಳಿ ಹೊರವಲಯದ ಅರಣ್ಯ ಪ್ರದೇಶದಲ್ಲಿ ಬುಧವಾರ ಕಾಡು ಹಂದಿ ಬೇಟೆಗೆ ಇಟ್ಟಿದ್ದ ನಾಡಬಾಂಬ್ ಸ್ಫೋಟಗೊಂಡು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಮೇಕೆ ಮೇಯಿಸಲು ಗ್ರಾಮದ ಹೊರವಲಯದ ಅರಣ್ಯ ಪ್ರದೇಶಕ್ಕೆ ಹೋಗಿದ್ದ ಗುಮ್ಮನಹಳ್ಳಿಯ ರಂಗಮ್ಮ(45) ಎಂಬುವರ ಕೈಗೆ ಗಂಭೀರ ಗಾಯವಾಗಿದೆ.

ADVERTISEMENT

ನಾಡಬಾಂಬ್ ಕಟ್ಟಿದ್ದ ದಾರಕ್ಕೆ ಮೇಕೆಯೊಂದು ಸಿಲುಕಿತ್ತು. ಮೇಕೆ ಬಿಡಿಸಲು ಮಹಿಳೆ ಹೋದಾಗ ಬಾಂಬ್ ಸ್ಫೋಟಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ರಂಗಮ್ಮ ಅವರನ್ನು ಆಂಬುಲೆನ್ಸ್‌ನಲ್ಲಿ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಘಟನಾ ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಕಲ್ಲಪ್ಪ ಕರಾತ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.