ADVERTISEMENT

ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಬಲೀಕರಣ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 4:34 IST
Last Updated 13 ಅಕ್ಟೋಬರ್ 2020, 4:34 IST
ಆನೇಕಲ್ ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ನಡೆದ ಆರ್ಥಿಕ ಸಬಲೀಕರಣ ಕಾರ್ಯಾಗಾರವನ್ನು ಕಾರ್ಪೋರೇಷನ್ ಬ್ಯಾಂಕ್‌ನ ಮುತ್ತಾನಲ್ಲೂರು ಶಾಖೆಯ ವ್ಯವಸ್ಥಾಪಕ ಚಂದ್ರಶೇಖರ್ ಉದ್ಘಾಟಿಸಿದರು
ಆನೇಕಲ್ ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ನಡೆದ ಆರ್ಥಿಕ ಸಬಲೀಕರಣ ಕಾರ್ಯಾಗಾರವನ್ನು ಕಾರ್ಪೋರೇಷನ್ ಬ್ಯಾಂಕ್‌ನ ಮುತ್ತಾನಲ್ಲೂರು ಶಾಖೆಯ ವ್ಯವಸ್ಥಾಪಕ ಚಂದ್ರಶೇಖರ್ ಉದ್ಘಾಟಿಸಿದರು   

ಆನೇಕಲ್: ಸ್ವಸಹಾಯ ಸಂಘಗಳು ಕೇವಲ ಹಣಕಾಸಿನ ವ್ಯವಹಾರ
ಗಳಿಗೆ ಮಾತ್ರ ಸೀಮಿತವಾಗ
ಬಾರದು. ಉತ್ಪಾದನಾ ಚಟುವಟಿಕೆ
ಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದು ಕಾರ್ಪೋರೇಷನ್‌ ಬ್ಯಾಂಕ್‌ನ ಮುತ್ತಾನಲ್ಲೂರು ಶಾಖೆಯ ವ್ಯವಸ್ಥಾಪಕ ಚಂದ್ರಶೇಖರ್‌ ಸಲಹೆ ನೀಡಿದರು.

ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ಭಾಷ್‌ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಬಲೀಕರಣ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಬ್ಯಾಂಕ್‌ಗಳ ಮೂಲಕ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಆದರೆ, ಸಂಘದ ಸದಸ್ಯರಿಗೆ ಬಡ್ಡಿ ನೀಡಲು ಮಾತ್ರ ಹಣ ಬಳಕೆ ಮಾಡಿಕೊಳ್ಳುತ್ತವೆ. ಸದಸ್ಯರು ಒಗ್ಗೂಡಿ ಹೈನುಗಾರಿಕೆ, ಹೊಲಿಗೆ, ಕಸೂತಿ ಸೇರಿದಂತೆ ವಿವಿಧ ವೃತ್ತಿಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಹೇಳಿದರು.

ADVERTISEMENT

ಮುದ್ರ ಯೋಜನೆಯಡಿ ಕೇಂದ್ರ ಸರ್ಕಾರ ಸಾಲ ಸೌಲಭ್ಯ ನೀಡುತ್ತಿದೆ. ಆ ಮೂಲಕ ಹಲವಾರು ಚಟುವಟಿಕೆ
ಗಳನ್ನು ಹಮ್ಮಿಕೊಳ್ಳಲು ಅವಕಾಶವಿದೆ. ಭಾಷ್ ಪ್ರತಿಷ್ಠಾನವು ಹಲವು
ತರಬೇತಿಗಳನ್ನು ನೀಡುತ್ತಿದೆ. ಇವುಗಳನ್ನು ಸದುಪಯೋಗ
ಪಡಿಸಿಕೊಳ್ಳಬೇಕು. ಯಾವುದೇ ಸಾಲ ಪಡೆದರೆ ವಿಮೆ ಮಾಡಿಸಬೇಕು. ಇದರಿಂದ ಕಷ್ಟಕಾಲದಲ್ಲಿ
ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಭಾಷ್‌ ಪ್ರತಿಷ್ಠಾನದ ಸಿಎಸ್‌ಆರ್‌ ವಿಭಾಗದ ವ್ಯವಸ್ಥಾಪಕ ಜಿನಚಂದ್ರ ಮಾತನಾಡಿ, ‘ಪ್ರತಿಷ್ಠಾನವು ತಾಲ್ಲೂಕಿನ ಹುಸ್ಕೂರು, ಮುತ್ತಾನಲ್ಲೂರು, ನೆರಳೂರು, ಶಾಂತಿಪುರ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳಾ
ಸಬಲೀಕರಣಕ್ಕೆ ಒತ್ತು ನೀಡಲು ಹಲವು ತರಬೇತಿ ಆಯೋಜಿಸಿದೆ. ಹೊಲಿಗೆ ತರಬೇತಿ, ಅಣಬೆ ಬೇಸಾಯ, ಬ್ಯಾಗ್‌ ತಯಾರಿಕೆ, ಬೇಕರಿ ತಿನಿಸು ತಯಾರಿಕೆ, ದಾಖಲೆಗಳ ನಿರ್ವಹಣೆ ಕಾರ್ಯಕ್ರಮದ ಮೂಲಕ ಸ್ವಸಹಾಯ ಸಂಘಗಳಿಗೆ ನೆರವಾಗಿದೆ’ ಎಂದರು.

ಕೆನರಾ ಬ್ಯಾಂಕ್‌ನ ಶ್ರೀನಿವಾಸ್, ಭಾಷ್ ಪ್ರತಿಷ್ಠಾನದ
ಕಾರ್ಯಕ್ರಮ ಅಧಿಕಾರಿ ಶ್ರೀನಿವಾಸ್‌ರಾವ್‌, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರಳಿ, ಹುಸ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ
ಶ್ರೀನಿವಾಸಮೂರ್ತಿ, ಮುಖಂಡರಾದ ಸುಜಾತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.