ADVERTISEMENT

ಆಸ್ಟ್ರೇಲಿಯದ ಮಧುಮೇಹ ಒಕ್ಕೂಟದೊಂದಿಗೆ ಒಡಂಬಡಿಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 6:22 IST
Last Updated 11 ಡಿಸೆಂಬರ್ 2013, 6:22 IST

ಬೆಳಗಾವಿ: ಮಧುಮೇಹ ಪೀಡಿತ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ, ಮಧು ಮೇಹ ನಿಯಂತ್ರಣದ ಕುರಿತು ಜಾಗೃತಿ ಹಾಗೂ ಮಧುಮೇಹ ಶಿಕ್ಷಣ ನೀಡು ವಲ್ಲಿ ನಿರತವಾಗಿರುವ ಆಸ್ಟ್ರೇಲಿಯಾದ ಅಂತರರಾಷ್ಟ್ರೀಯ ಮಧುಮೇಹ ಒಕ್ಕೂಟದೊಂದಿಗೆ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಒಡಂಬಡಿಕೆ ಮಾಡಿಕೊಂಡಿದೆ.

ಈಗಾಗಲೇ ಭಾರತದ 4 ಆಸ್ಪತ್ರೆಗಳು ಒಪ್ಪಂದ ಮಾಡಿಕೊಂಡಿದ್ದು, ‘ಮಧು ಮೇಹ ಮಕ್ಕಳ ಆರೈಕೆಗಾಗಿ ಜೀವನ’ ಎಂಬ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿವೆ. ಸದ್ಯ ಕೆಎಲ್‌ಇ ಸಂಸ್ಥೆಯು ಭಾರತದ 5ನೇ ಹಾಗೂ ದಕ್ಷಿಣ ಭಾರತದ 2ನೇ ಆಸ್ಪತ್ರೆಯಾಗಿ ಒಪ್ಪಂದ ಮಾಡಿಕೊಂಡಿದೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಹಾಗೂ ಅಂತರರಾಷ್ಟ್ರೀಯ ಮಧುಮೇಹ ಒಕ್ಕೂಟದ ಮುಖ್ಯ ಕಾರ್ಯನಿವಾಹಣಾಧಿಕಾರಿ ಡಾ. ಪೆಟ್ರಾ ವಿಲ್ಸನ್‌ ಅವರು ಸಹಿ ಹಾಕುವ ಒಪ್ಪಂದ ಮಾಡಿಕೊಂಡರು.

ಕೆಎಲ್ಇ ಸಂಸ್ಥೆಯ ಮಧುಮೇಹ ಕೇಂದ್ರದಲ್ಲಿ ಈಗಾಗಲೇ 200ಕ್ಕೂ ಹೆಚ್ಚು ಮಧುಮೇಹ ಪೀಡಿತ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 65ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡ ಲಾಗುತ್ತಿದೆ. ಅವಶ್ಯವಿರುವ ಇನ್ಸುಲಿನ್, ಪಠ್ಯಪುಸ್ತಕ ಹಾಗೂ ಪಠ್ಯೇತರ ಸಾಮಗ್ರಿ ಗಳನ್ನು ಉಚಿತವಾಗಿ ವಿತರಿಸಲಾಗು ತ್ತಿದೆ. ಈ ಒಡಂಬಡಿಕೆಯಿಂದ ಈ ಭಾಗದ ಮಧುಮೇಹ ಪೀಡಿತ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಿದಂತಾಗಿದೆ ಎಂದ ಡಾ. ಎಂ.ವಿ.ಜಾಲಿ ತಿಳಿಸಿದ್ದಾರೆ.

ಎನ್ಎಬಿಎಲ್ ಮಾನ್ಯತೆ:
ಕೆಎಲ್ಇ ಆಸ್ಪತ್ರೆಯ ಪ್ರಯೋಗಾಲ ಯಕ್ಕೆ ಎನ್ಎಬಿಎಲ್ (ರಾಷ್ಟ್ರೀಯ ಪ್ರಯೋಗಾಲಯ ಮಾನ್ಯತಾ ಮಂಡಳಿ) ಮಾನ್ಯತೆ ಸಿಕ್ಕಿದೆ. ಪ್ರಯೋಗಾಲಯದ ವ್ಯವಸ್ಥೆಯನ್ನು ಬದಲಾಯಿಸಿ, ಅತ್ಯಾ ಧುನಿಕ ಸಲಕರಣೆಗಳಿಂದ ನ್ಯೂಮ್ಯಾಟಿಕ್‌ ಟ್ಯೂಬಿಂಗ್‌ ಸಿಸ್ಟಮ್‌ಗೆ ಒಳಪಡಿಸಲಾಗಿದೆ.

ಎಲ್ಲ ವಿಧದ ಪ್ರಯೋಗಾಲಯ ಗಳನ್ನು ಒಂದೇ ಘಟಕವನ್ನಾಗಿ ಮಾರ್ಪ ಡಿಸಲಾಗಿದೆ. ಅಲ್ಲದೇ ಎನ್‌ಎಬಿಎಚ್‌ (ರಾಷ್ಟ್ರೀಯ ಆಸ್ಪತ್ರೆ ಮಾನ್ಯತಾ ಮಂಡಳಿ) ಮಾನ್ಯತೆ ಪಡೆಯುವ ಹಂತಕ್ಕೆ ಆಸ್ಪತ್ರೆ ತಲುಪಿದ್ದು, ಶೀಘ್ರದಲ್ಲೇ ಅದು ನೆರವೇರಲಿದೆ ಎಂದು ಡಾ. ಎಂ.ವಿ. ಜಾಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT