ADVERTISEMENT

ಖಾಸಗಿ ಪರಿಣಿತರಿಂದ ಕಿತ್ತೂರು ಮಾಸ್ಟರ್ ಪ್ಲಾನ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:34 IST
Last Updated 7 ಸೆಪ್ಟೆಂಬರ್ 2013, 6:34 IST

ಚನ್ನಮ್ಮನ ಕಿತ್ತೂರು: `ಐತಿಹಾಸಿಕ ಕಿತ್ತೂರು ಪಟ್ಟಣ ಹಾಗೂ ಅದಕ್ಕೆ ಸಂಬಂಧಿಸಿದ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಖಾಸಗಿ ಪರಿಣಿತ ಎಂಜಿನಿಯರ್‌ಗಳಿಂದ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುವುದು' ಎಂದು ಅಬಕಾರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಕಿತ್ತೂರು ಉತ್ಸವ ಪೂರ್ವ ಸಿದ್ಧತೆ ಸಭೆ ನಡೆಸಲು ಶುಕ್ರವಾರ ಇಲ್ಲಿಗೆ ಆಗಮಿಸಿದ್ದ ಅವರು ಕಾಂಗ್ರೆಸ್ ಮುಖಂಡ ಸೋಮಶೇಖರ ಬಿಕ್ಕಣ್ಣವರ ಅವರ ಮನೆಯಲ್ಲಿ ಭೇಟಿ ಯಾದ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
`ಅಭಿವೃದ್ಧಿ ಪ್ರಾಧಿಕಾರದಡಿ ಬರುವ ಎಲ್ಲ 15ಹಳ್ಳಿಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಕಾಮಗಾರಿ ಅನುಷ್ಠಾನಕ್ಕಾಗಿ ಅದರಲ್ಲಿ ಮೂರು ಹಂತಗಳನ್ನಾಗಿ ವಿಂಗಡಿಸ ಲಾಗುವುದು. ಪ್ರಥಮ ಹಂತದಲ್ಲಿಯೇ ಕಿತ್ತೂರು ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು' ಎಂದು ಅವರು ಸ್ಪಷ್ಟಪಡಿಸಿದರು.

`ಅಭಿವೃದ್ಧಿ ಪ್ರಾಧಿಕಾರಕ್ಕೆ ವಿಧೇಯಕ ಸ್ವರೂಪ ನೀಡಲಾಗಿದೆ. ಪ್ರತಿವರ್ಷ ್ಙ3 ಅಥವಾ 5ಕೋಟಿ ಯಂತೆ ಹಣ ಬಿಡುಗಡೆಯಾಗುತ್ತಿದೆ. ಪ್ರತಿವರ್ಷ ದುಡ್ಡು ಎಷ್ಟು ಬಿಡುಗಡೆ ಯಾಯಿತು ಎಂಬುದು ಮುಖ್ಯವಲ್ಲ. ಬಿಡುಗಡೆಯಾದ ದುಡ್ಡು ಸದ್ವಿ ನಿಯೋಗ ಆಯಿತೇ ಎಂಬುದು ಮುಖ್ಯ ವಾಗಿದೆ' ಎಂದು ಹೇಳಿದರು.

ಕೋಟೆ ವೀಕ್ಷಣೆ:  ಕಿತ್ತೂರ ಕೋಟೆಗೆ ತೆರಳಿದ ಸಚಿವರು ಅಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ವೀಕ್ಷಣೆ ನಡೆಸಿದರು. ವಸ್ತು ಸಂಗ್ರ ಹಾಲಯದಲ್ಲಿ ಸಂಗ್ರಹಿಸಿ ಡಲಾದ ವಸ್ತುಗಳನ್ನೂ ಕುತೂಹ ಲದಿಂದ ಸಚಿವರು ವೀಕ್ಷಿಸಿದರು.

ಜಿಲ್ಲಾಧಿಕಾರಿ ಎನ್. ಜಯರಾಂ, ಜಿ. ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಾ ಚೋಳನ್, ಜಿಲ್ಲಾ ಪೊಲೀಸ್ ವರಿಷ್ಠ ಡಾ. ಚಂದ್ರಗುಪ್ತ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ  ಎಂಜಿನಿಯರ್ ಪಿ. ಎನ್. ನಾಯಕ, ಉಪವಿಭಾಗಾಧಿ ಕಾರಿ ವಿಜಯಕುಮಾರ್ ಹೊನಕೇರಿ, ತಹಶೀಲ್ದಾರ್ ವಿನಾಯಕ ಪಾಲನಕರ, ಎಸ್. ಟಿ. ಯಂಪುರೆ, ಪ್ರಾಚ್ಯ ವಸ್ತು ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ವಾಸು ದೇವ್, ಕ್ಯೂರೇಟರ್ ಸುನೀಲ್, ಕೆಪಿಸಿಸಿ ಸದಸ್ಯ ಶಂಕರ ಹೊಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸಪ್ಪ ಕಾದ್ರೊಳ್ಳಿ, ಕಿತ್ತೂರು ಸ್ಮಾರಕ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಶಿವನ ಸಿಂಗ್ ಮೊಕಾಶಿ, ಸಯ್ಯದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.