ADVERTISEMENT

ಗೋಶಾಲೆಗಳಿಗೆ ಹಿಂಡಿ ವಿತರಣೆ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 9:00 IST
Last Updated 6 ಜುಲೈ 2012, 9:00 IST

ಐಗಳಿ (ಅಥಣಿ): ಅಥಣಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗೋಶಾಲೆಗಳಿಗೆ ಸ್ವಂತ ಖರ್ಚಿನಲ್ಲಿ ಹಿಂಡಿ ವಿತರಿಸುವುದಾಗಿ ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.ಸ್ಥಳೀಯ ಮಾಣಿಕಪ್ರಭು ವಿರಕ್ತಮಠದ ಆವರಣದಲ್ಲಿರುವ ಗೋಶಾಲೆಗೆ ಭೇಟಿ ನೀಡಿದ್ದ ಅವರು ರೈತರಿಗೆ ಹಿಂಡಿ ವಿತರಿಸಿ ಮಾತನಾಡಿದರು.

ಪ್ರತಿದಿನ ಕಬ್ಬಿನ ಮೇವು ಬಳಸಿಕೊಂಡು ಕಣಿಕೆ ತಯಾರಿಸಿಕೊಳ್ಳಿ. ಮಳೆಯಾಗಿ ಗದ್ದೆ-ತೋಟಗಳಿಗೆ ವಾಹನಗಳಲ್ಲಿ ಹೋಗಲು ಸಾಧ್ಯವಾಗದಿದ್ದಾಗ ಕಣಿಕೆ ಮೇವು ಬಳಸಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.

ಗೋಶಾಲೆಯಲ್ಲಿರುವ 1,200 ಜಾನುವಾರುಗಳಿಗೆ ಪ್ರತಿಯೊಂದಕ್ಕೆ ಮೂರು ಕೆ.ಜಿಯಂತೆ ಹಿಂಡಿ ಪೂರೈಸುವುದಾಗಿ ತಿಳಿಸಿದರು.ತಹಶೀಲ್ದಾರ ಜಿ.ಆರ್. ಶೀಲವಂತರ ಮಾತನಾಡಿ, ಅಥಣಿ ತಾಲೂಕಿನಲ್ಲಿ ಎಲ್ಲ ಗೋಶಾಲೆ ಸೇರಿ 20 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಕಬ್ಬಿನ ಮೇವು ಹಾಗೂ ಕಣಿಕೆ ವಿತರಿಸಲಾಗಿದೆ.

ತಾಲೂಕಾ ಪಶು ವೈದ್ಯಾಧಿಕಾರಿಗಳಾದ ಡಾ. ಬಿ.ಎನ್. ನಂದಿಗೌಡರ, ಡಾ. ವಿ.ಜಿ.ಗಂಗಾಧರ, ಎನ್.ಡಿ. ಪತ್ತಾರ, ಗ್ರಾಮ ಲೆಕ್ಕಾಧಿಕಾರಿ ವಿ.ಬಿ. ಕದಂ, ಗ್ರಾ.ಪಂ. ಅಧ್ಯಕ್ಷ ಅಂಬಾಜಿ ಕಾಳೆ, ಬೆಂಗಳೂರು ಸಹಕಾರ ಮಾರಾಟ ಮಹಾ ಮಂಡಳ ನಿರ್ದೇಶಕ ಸಿ.ಎಸ್. ನೇಮಗೌಡ, ಡಾ. ಬಸವರಾಜ ರೂಢಗಿ, ಆರ್.ಆರ್.ತೆಲಸಂಗ, ಎಂ.ಪಿ. ಮಾಕಾಣಿ,  ಜಿ.ಎಸ್.ಬಿರಾದಾರ, ಎಂ.ಬಿ.ನೇಮಗೌಡ, ಬೈರಪ್ಪ ಬಿಜ್ಜರಗಿ, ಎ.ಎಸ್.ತೆಲಸಂಗ, ದುಂಡಪ್ಪ ದೊಡಮನಿ,  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.