ADVERTISEMENT

‘ಜೆಡಿಎಸ್‌ ಜೊತೆ ರೈತ ಸಂಘ ವಿಲೀನಗೊಳಿಸಿ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 7:15 IST
Last Updated 5 ಡಿಸೆಂಬರ್ 2017, 7:15 IST

ಚನ್ನಮ್ಮನ ಕಿತ್ತೂರು: ‘ಜಾತ್ಯತೀತ ಜನತಾದಳ ಪಕ್ಷದಲ್ಲಿ ಅಖಂಡ ಕರ್ನಾಟಕ ರೈತ ಸಂಘ ವಿಲೀನಗೊಳಿಸಿ ಬರುವ ವಿಧಾನಸಭೆ ಚುನಾವಣೆ ಎದು ರಿಸುವ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ತಾಲ್ಲೂಕಿನ ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದಲ್ಲಿ ಸೋಮ ವಾರ ನಡೆದ ರೈತರ ಸಭೆಯಲ್ಲಿ ಒಕ್ಕೊ ರಲ ಸಲಹೆ ವ್ಯಕ್ತವಾಯಿತು.

ಮುಖಂಡರಾದ ಮಹಾಂತೇಶ ರಾವುತ್‌, ನಿಂಗಪ್ಪ ನಂದಿ, ಸಿದ್ಲಿಂಗಪ್ಪ ಬಸೆಟ್ಟಿ ಹಾಗೂ ಅಪ್ಪೇಶ ದಳವಾಯಿ ಮಾತನಾಡಿ, ‘ಜೆಡಿಎಸ್ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡ ದೇ ಸಂಘ ವಿಲೀನಗೊಳಿಸಬೇಕು. ಬರುವ ವಿಧಾನಸಭೆ ಚುನಾವಣೆಯಲ್ಲಿ ಬಾಬಾಗೌಡರು ಕಿತ್ತೂರು ಮತ ಕ್ಷೇತ್ರದಿಂದ ಸ್ಪರ್ಧಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಹಾಗೂ ರೈತ ಹೋರಾಟಗಾರ ಬಾಬಾ ಗೌಡ ಪಾಟೀಲ ನೇತೃತ್ವದಲ್ಲಿಯೇ ನಡೆದ ಸಭೆಯಲ್ಲಿ ಈ ಸಲಹೆ ಬಂದಿದ್ದರಿಂದ, ‘ಇದೇ 18ರಂದು ಚಿಕ್ಕಬಾಗೇವಾಡಿಯಲ್ಲಿ ನಡೆಯುವ ಸಭೆ ಯಲ್ಲಿ ಚರ್ಚಿಸಿ ಅಂತಿಮ ನಿರ್ಣಯಕ್ಕೆ ಬರಲಾಗುತ್ತದೆ’ ಎಂದು ಅಪ್ಪೇಶ ದಳವಾಯಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.