ADVERTISEMENT

ಬೆಳಗಾವಿಯಲ್ಲಿ ಜಿಟಿ ಜಿಟಿ ಮಳೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 8:25 IST
Last Updated 11 ಆಗಸ್ಟ್ 2012, 8:25 IST

ಬೆಳಗಾವಿ: ನಗರದಲ್ಲಿ ಶುಕ್ರವಾರ ದಿನವಿಡೀ ಜಿಟ ಜಿಟಿ ಮಳೆ ಸುರಿದಿದೆ. ಬೆಳಿಗ್ಗೆಯಿಂದಲೇ ದಟ್ಟವಾದ ಮೋಡ ಕವಿದ ವಾತಾವರಣವಿತ್ತು. ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಕೆಲವೊಂದು ಮಳೆ ಮಾಪನ ಕೇಂದ್ರಗಳಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ.

ಗುರುವಾರದಿಂದ ಶುಕ್ರವಾರ ಬೆಳಿಗಿನವರೆಗೆ ಜಿಟಿ ಜಿಟಿ ಮಳೆ ಸುರಿದಿದೆ. ಖಾನಾಪುರ ತಾಲ್ಲೂಕಿನ ಕಣಕುಂಬಿಯ ಮಳೆ ಮಾಪನಾ ಕೇಂದ್ರದಲ್ಲಿ 44.8 ಮಿ.ಮೀ., ಲೋಂಡಾದಲ್ಲಿ 22.8, ಬೆಳಗಾವಿಯ ಕಾಕತಿಯಲ್ಲಿ 16.6 ಮಿ.ಮೀ., ಚಿಕ್ಕೋಡಿ ತಾಲ್ಲೂಕಿನ ನಿಪ್ಪಾಣಿ ಎಆರ್‌ಎಸ್ ಕೇಂದ್ರದಲ್ಲಿ 25.4 ಮಿ.ಮೀ. ಹಾಗೂ ಹುಕ್ಕೇರಿ ತಾಲ್ಲೂಕಿನ ಬುಗತಿ ಆಲೂರ ಕೇಂದ್ರದಲ್ಲಿ 28.1 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.