ADVERTISEMENT

ವಧೆ ತಪ್ಪಿಸಿ ಗೋಶಾಲೆಗೆ ಕಳುಹಿದರು...

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 7:15 IST
Last Updated 17 ಮಾರ್ಚ್ 2011, 7:15 IST

ಸವದತ್ತಿ: ಗುರ್ಲಹೊಸೂರಿನ ಹೂಲಿ ಅಜ್ಜನವರ ಗುಡಿಯ ಗೂಳಿಯು ರೈತರ ಎತ್ತುಗಳಿಗೆ ಹಾಯ್ದು ಗಾಯಗೊಳಿಸುತ್ತಿದೆ ಎಂದು ಕೆಲವರು ವಧಾಗಾರರಿಗೆ ಮಾರಲು ಮುಂದಾದಾಗ, ವಿಶ್ವಹಿಂದೂ ಪರಿಷತ್‌ನ ಸದಸ್ಯರು ಅದನ್ನು ತಪ್ಪಿಸಿ ಬೆಳಗಾವಿ ಹಲಗಾದ ಗೋಶಾಲೆಗೆ ಕಳಿಸಿದ ಘಟನೆ ಬುಧವಾರ ನಡೆದಿದೆ.

ಈ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ವಿ.ಹಿ.ಪನ ಜಿಲ್ಲಾ ಸಂಯೋಜಕ ಶಂಕರ ಮನ್ನೂರ,  ರೈತ ಬಾಂಧವರು ಕೊಂದು ತಿನ್ನುವ ವ
ರಿಗೆ ಹಣಕ್ಕಾಗಿ ಮಾರುವುದರ ಬದಲು ಗೋಶಾಲೆಗಳಿಗೆ ಕೊಡಿ. ಅದರ ವಂಶ ಬೆಳೆಸಲು ಸಹಕರಿಸಿ ಎಂದರು.

ಗೋವುಗಳನ್ನು ಮನೆಯ ಸದಸ್ಯನಂ ತೆ ಕಾಣುವುದರ ಜತೆಗೆ ವಯಸ್ಸಾದ ಗೋವುಗಳಿಗೆ ಕಡೆಯ ದಿನಗಳನ್ನು ನೆಮ್ಮದಿಯಿಂದ ಕಳೆಯಲು ಅವಕಾಶ ಮಾಡಿಕೊಡಿ ಎಂದರು. 
ಅಲ್ಲಿದ್ದ ಮಹಿಳೆಯರು  ‘ ಈ ಗೂಳು ನಿತ್ಯ ನಮ್ಮ ಮನೆಗೆ ಬಂದು ಪೂಜೆ ಮಾಡಿಸಿಕೊಂಡು, ನಾವು ಕೊಟ್ಟ ರೊಟ್ಟಿ ಹಾಗೂ ತರಕಾರಿ ಸೊಪ್ಪುಗಳನ್ನು ತಿಂದು ಹೋಗುತ್ತಿತ್ತು. ಯಾರಿಗೂ ಹಾನಿ ಮಾಡಿಲ್ಲ’ ಎಂದು ಹೇಳಿದರು.ನಂತರ ಆ ಗೂಳಿಯನ್ನು ಹಲಗಾ ಗೋಶಾಲೆಗೆ ಕಳಿಸಿದರು. ಈ ಸಂದರ್ಭದಲ್ಲಿ ಅಲ್ಲಿನ ಹಿರಿಯರು, ವಿಶ್ವ ಹಿಂದೂ ಪರಿಷತ್‌ನ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.