ADVERTISEMENT

ಬೆಳಗಾವಿ, ಚಿಕ್ಕೋಡಿಯಲ್ಲಿ 18 ‘ಸಖಿ’ ಮತಗಟ್ಟೆಗಳು; ‘ಬಣ್ಣ’ ಬದಲು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 15:49 IST
Last Updated 22 ಏಪ್ರಿಲ್ 2019, 15:49 IST

ಬೆಳಗಾವಿ: ಇಲ್ಲಿನ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸುವ ಉದ್ದೇಶದಿಂದ 18 ಮತಗಟ್ಟೆಗಳನ್ನು ‘ಸಖಿ’ ಮಹಿಳಾ ಮತದಾರ ಸ್ನೇಹಿ ಕೇಂದ್ರಗಳನ್ನಾಗಿ ರೂಪಿಸಲಾಗಿದೆ.

ಅತಿ ಹೆಚ್ಚು ಮಹಿಳಾ ಮತದಾರರಿರುವ ಮತಗಟ್ಟೆಗಳಲ್ಲಿನ ಗೋಡೆಗಳಿಗೆ ಕೆಲವೆಡೆ ತಿಳಿಗುಲಾಬಿ ಬಣ್ಣ ಹಾಗೂ ಕೆಲವೆಡೆ ನೀಲಿಬಣ್ಣವನ್ನು ಹಚ್ಚಿ ಆಕರ್ಷಕಗೊಳಿಸಲಾಗಿದೆ.

‘ಇಲ್ಲಿ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಪೊಲೀಸರು ಸೇರಿದಂತೆ ಎಲ್ಲ ಚುನಾವಣಾ ಸಿಬ್ಬಂದಿ ಮಹಿಳೆಯರೇ ಇರುತ್ತಾರೆ. ಬಣ್ಣ–ಬಣ್ಣದ ಶಾಮಿಯಾನ ಹಾಕಲಾಗಿದೆ. ಮಹಾದ್ವಾರಗಳನ್ನೂ ಕೂಡ ಸಿದ್ಧಪಡಿಸಲಾಗಿದೆ. ಚಿಣ್ಣರ ಅಂಗಳ, ವಿಶ್ರಾಂತಿ ಕೋಣೆ, ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಸೇವಾ ಸೌಲಭ್ಯ, ಸಖಿ ಸೆಲ್ಫಿ ಕಾರ್ನರ್, ವ್ಹೀಲ್ ಚೇರ್‌ ವ್ಯವಸ್ಥೆ ಮಾಡಲಾಗಿದೆ’ ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ADVERTISEMENT

‘ಇಲ್ಲಿ ಪುರುಷರು ಕೂಡ ಮತ ಚಲಾವಣೆ ಮಾಡಲು ಅವಕಾಶವಿದೆ’ ಎಂದು ತಿಳಿಸಿದರು.

ಕಳೆದ ವರ್ಷ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ‘ಸಖಿ’ ಮತಗಟ್ಟೆಗಳನ್ನು ಸಂಪೂರ್ಣವಾಗಿ ತಿಳಿಗುಲಾಬಿ (ಪಿಂಕ್) ಬಣ್ಣದಿಂದ ಅಲಂಕರಿಸಿ ಆಕರ್ಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.