ಕೌಜಲಗಿ: ಪಟ್ಟಣದ ಕಟ್ಟಿ ಬಸವೇಶ್ವರ ದೇವಸ್ಥಾನ ಬಳಿಯ ಪಾರ್ವತಿ ತಮ್ಮನಪ್ಪ ಹಳ್ಳೂರ ಎಂಬುವರ ಮನೆಗೆ ಶುಕ್ರವಾರ ರಾತ್ರಿ ನುಗ್ಗಿದ ಕಳ್ಳರು, 20 ತೊಲೆ ಚಿನ್ನಾಭರಣ ಕಳವು ಮಾಡಿದ್ದಾರೆ.
‘ಮಧ್ಯರಾತ್ರಿ 1.30ರ ಸುಮಾರಿಗೆ ಮೊದಲ ಮಹಡಿಯ ಬಾಗಿಲು ತೆಗೆದು, ಮನೆಯೊಳಗೆ ನುಗ್ಗಿದ ಮೂವರು ಕಳ್ಳರು, ಚಿನ್ನಾಭರಣ ಕದ್ದಿದ್ದಾರೆ. ಮನೆಯಲ್ಲಿ ಮಲಗಿದ್ದ ಲೋಕೇಶ ಬಸಪ್ಪ ದಳವಾಯಿ ಎಂಬುವರು ಎಚ್ಚರಗೊಂಡು ಕಳ್ಳರನ್ನು ಹಿಡಿಯಲು ಮುಂದಾದರು. ಅವರ ಕೈಗೆ ಚಾಕುವಿನಿಂದ ಇರಿದು, ಕಳ್ಳರು ಪರಾರಿಯಾದರು’ ಎಂದು ಕುಲಗೋಡ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಗೋಕಾಕ ಡಿವೈಎಸ್ಪಿ ರವಿ ನಾಯಕ, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಕುಲಗೋಡ ಪಿಎಸ್‌ಐ ಆನಂದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.