ಬೆಳಗಾವಿ: ‘ಚಲನಚಿತ್ರ ನಟಿ ಉಮಾಶ್ರೀ ಅಭಿನಯದ ರಂಗಸಂಪದ ಬೆಂಗಳೂರು ತಂಡದ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕವು ಇಲ್ಲಿನ ಕೋನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಜುಲೈ 5ರಂದು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ’ ಎಂದು ರಂಗಸಂಪದ ಬೆಳಗಾವಿ ಅಧ್ಯಕ್ಷ ಅರವಿಂದ ಕುಲಕರ್ಣಿ ಹೇಳಿದರು.
ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಟಕದಲ್ಲಿ ಉಮಾಶ್ರೀ ಅವರು, ‘ಶರ್ಮಿಷ್ಠೆ’ ಪಾತ್ರದಲ್ಲಿ ಕಾಣಿಸಿಕೊಳ್ಳುವರು. ಬೆಂಗಳೂರು, ಮೈಸೂರಿನಲ್ಲಿ ನಾಟಕ ಪ್ರದರ್ಶನಗೊಂಡು ಕಲಾಸಕ್ತರ ಮನಗೆದ್ದಿದೆ’ ಎಂದರು.
‘40 ವರ್ಷಗಳ ಹಿಂದೆ, ಚಲನಚಿತ್ರ ರಂಗ ಪ್ರವೇಶಕ್ಕೂ ಮುನ್ನ ಉಮಾಶ್ರೀ ಅವರು ರಂಗಸಂಪದದ ಐದು ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಸಿದ್ದರು’ ಎಂದು ತಿಳಿಸಿದರು.
ಪ್ರಸಾದ ಕಾರಜೋಳ, ದಿಲೀಪ ಮಳಗಿ, ಗುರುನಾಥ ಕುಲಕರ್ಣಿ, ರಾಮಚಂದ್ರ ಕಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.