ಹುಕ್ಕೇರಿ: ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಆದಿವೀರ್ ಸೌಹಾರ್ದ ಸಹಕಾರಿಯು 2024-25ನೇ ಆರ್ಥಿಕ ವರ್ಷದಲ್ಲಿ ₹27.44 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥಾಪಕ ಸಂಜಯ ಮುನ್ನೋಳಿ ಹೇಳಿದರು.
ತಾಲೂಕಿನ ಬೆಲ್ಲದಬಾಗೇವಾಡಿ ಆದಿವೀರ ಸೌಹಾರ್ದ ಸಹಕಾರಿಯ ಸಭಾ ಭವನದಲ್ಲಿ ಅವರು ಮಾತನಾಡಿದರು.
‘ಸಂಸ್ಥೆಯು ಒಟ್ಟು ₹10.56 ಕೋಟಿ ಠೇವು, 704 ಜನ ಸದಸ್ಯರಿಂದ ₹13.17ಲಕ್ಷ ಷೇರು ಬಂಡವಾಳ, ₹30.09 ಲಕ್ಷ ನಿಧಿ, ₹ 3.05 ಕೋಟಿ ಹೂಡಿಕೆ ಹೊಂದಿದೆ ಎಂದರು.
ಸಹಕಾರಿಯ ಸದಸ್ಯರಿಗೆ ₹7.41 ಕೋಟಿ ಸಾಲ ನೀಡಿ, ಶೇ 98ರಷ್ಟು ಸಾಲ ವಸೂಲಿ ಮಾಡಲಾಗಿದೆ ಎಂದರು.
ಅಧ್ಯಕ್ಷ ರವೀಂದ್ರ ಖೇಮಲಾಪುರೆ, ಉಪಾಧ್ಯಕ್ಷ ಶ್ರೀಕಾಂತ ತೇಜನ್ನವರ, ನಿರ್ದೇಶಕರಾದ ಅಭಿಜೀತ ಖೇಮಲಾಪುರೆ, ಶಾಂತಿನಾಥ ಗಲಗಲಿ, ಅಣ್ಣಪ್ಪ ಮುನ್ನೋಳಿ, ಭುಜಪ್ಪ ಖೇಮಲಾಪುರೆ, ಸಿದ್ದಪ್ಪ ಹಲಕರ್ಣಿ, ಅಣ್ಣಾಸಾಹೇಬ ಮುನ್ನೋಳಿ, ಭರತೇಶ ಮುನ್ನೋಳಿ, ರಾಮಪ್ಪ ಅಲಕನೂರ, ಯಲ್ಲಪ್ಪ ಮಾದಿಗರ, ಸದಸ್ಯರು ಇದ್ದರು. ಕಾರ್ಯದರ್ಶಿ ಭುಜಬಲಿ ಉಂದ್ರಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.