ADVERTISEMENT

ಐನಾಪೂರ ಜಾತ್ರೆ,ಕೃಷಿ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 7:43 IST
Last Updated 15 ಜನವರಿ 2026, 7:43 IST
ಕಾಗವಾಡ ತಾಲ್ಲೂಕಿನ ಐನಾಪೂರ ಪಟ್ಟಣದ ಸಿದ್ದೇಶ್ವರ ಜಾತ್ರಾ ಮಹೋತ್ಸವದ 33ನೇ ಕೃಷಿ ಮೇಳವನ್ನು ಅಮರೇಶ್ವರ ಮಹಾರಾಜರು ರಾಹುಲ ಜಾರಕಿಹೊಳಿ ಉದ್ಘಾಟಿಸಿದರು.
ಕಾಗವಾಡ ತಾಲ್ಲೂಕಿನ ಐನಾಪೂರ ಪಟ್ಟಣದ ಸಿದ್ದೇಶ್ವರ ಜಾತ್ರಾ ಮಹೋತ್ಸವದ 33ನೇ ಕೃಷಿ ಮೇಳವನ್ನು ಅಮರೇಶ್ವರ ಮಹಾರಾಜರು ರಾಹುಲ ಜಾರಕಿಹೊಳಿ ಉದ್ಘಾಟಿಸಿದರು.   

ಕಾಗವಾಡ:  ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಜಾತ್ರೆಯ ಜೊತೆಗೆ ಉತ್ತರ ಕರ್ನಾಟಕದ ಅತಿ ದೊಡ್ಡ ಕೃಷಿ ಮೇಳ ಐನಾಪೂರದಲ್ಲಿ ಏರ್ಪಡಿಸಲಾಗಿದೆ. ಇದು ಆಧುನಿಕ ಪದ್ದತಿಯ ಕೃಷಿ ಬಗ್ಗೆ ರೈತಾಪಿ ವರ್ಗಕ್ಕೆ ವರದಾನ ಆಗಿದೆ ಎಂದು ಯುವ ಕಾಂಗ್ರೆಸ್ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಹೇಳಿದರು.

ಅವರ ಬುಧವಾರ ತಾಲ್ಲೂಕಿನ ಐನಾಪೂರ ಪಟ್ಟಣದ ಸಿದ್ದೇಶ್ವರ ಜಾತ್ರೆಯ ಕೃಷಿ ಮೇಳೆ ಉದ್ಘಾಟಿಸಿ ಮಾತನಾಡಿದರು.

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಕವಲಗುಡ್ಡ ಅಮರೇಶ್ವರ ಮಹಾರಾಜರು ‘ಕೃಷಿ ಮಾಡಬೇಕಾದರೆ ಅಂತರಂಗದ ಕೃಷಿ ಮಾಡಿದರೆ ಮಾತ್ರ ಬಹಿರಂಗದ ಕೃಷಿ ಮಾಡಲು ಸಾಧ್ಯ. ಐನಾಪೂರ ಸುತ್ತಮುತ್ತಲಿನ ಪ್ರದೇಶದ ರೈತರು ಇಂತಹ ಬೃಹತ್ ಕೃಷಿ ಮೇಳಕ್ಕೆ ಆಗಮಿಸಿ ಲಾಭ ಪಡೆಯಬೇಕು’ ಎಂದು ಕರೆ ನೀಡಿದರು.

ವೇದಿಕೆ ಮೇಲೆ ಅಮಗೊಂಡ ಮಹಾರಾಜರು, ಪ ಪಂ ಅಧ್ಯಕ್ಷೆ ಕಸ್ತೂರಿ ಮಡವಾಳ, ಜಾತ್ರಾ ಕಮಿಟಿ ಅಧ್ಯಕ್ಷ ದಾದಾಸಾಹೇಬ ಜಂತೆನ್ನವರ ಸುಭಾಷ ಪಾಟೀಲ, ಪ.ಪಂ ಸದಸ್ಯರಾದ ಪ್ರವೀಣ ಗಾಣಿಗೇರ ಅರುಣ ಗಾಣಿಗೇರ, ಸಂಜಯ ಕುಚನೂರೆ, ಸಂಜಯ ಬಿರಡಿ, ಸುಭಾಷ ಪಾಟೀಲ, ಚಮನ್ನರಾವ ಪಾಟೀಲ, ರಮೇಶ ಸಿಂದಗಿ, ಸುದರ್ಶನ ಜಂತೆನ್ನವರ, ಉಮೇಶ ಪಾಟೀಲ, ಪ್ರಕಾಶ ಕೊರ್ಬು ಸೇರಿದಂತೆ ಅನೇಕರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT