
ಬೆಳಗಾವಿ: ‘ಮಹಿಳೆಯರ ಶಕ್ತಿ, ಸ್ವಾಭಿಮಾನದ ಪ್ರತೀಕವಾದ ‘ಅಕ್ಕ ಪಡೆ’ಯನ್ನು ಶೀಘ್ರವೇ ತಾಲ್ಲೂಕುಮಟ್ಟಕ್ಕೆ ವಿಸ್ತರಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಮಂಗಳವಾರ ಅಕ್ಕಪಡೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯ 31 ಎಸ್‌ಪಿ ಕಚೇರಿಗಳು, ಐದು ಪೊಲೀಸ್ ಕಮಿಷನರೇಟ್ ಸೇರಿ 36 ಕಡೆ ಅಕ್ಕ ಪಡೆ ಆರಂಭಿಸಿದ್ದೇವೆ. ಉತ್ತಮ ಸ್ಪಂದನೆ ಇದೆ. ಮುಂದಿನ ಬಜೆಟ್‌ನಲ್ಲಿ ಅಂಗೀಕಾರ ಪಡೆದು, ರಾಜ್ಯದ ಎಲ್ಲ ತಾಲ್ಲೂಕುಮಟ್ಟಕ್ಕೆ ಇದನ್ನು ವಿಸ್ತರಿಸಲಾಗುವುದು’ ಎಂದರು.
‘ಅಕ್ಕ ಪಡೆ’ ಪ್ರತಿ ತಂಡದಲ್ಲಿ ಗೃಹರಕ್ಷಕ ದಳದ ನಾಲ್ವರು ಮಹಿಳೆಯರು, ಇಬ್ಬರು ಮಹಿಳಾ ಪೊಲೀಸರು, ಒಬ್ಬರು ಚಾಲಕ (ಕಾನ್‌ಸ್ಟೆಬಲ್) ಸೇರಿ ಏಳು ಮಂದಿ ಇರುತ್ತಾರೆ. ಕಮಾಂಡೊ ಸಮವಸ್ತ್ರ ಧರಿಸಿರುತ್ತಾರೆ. ಮಹಿಳೆಯರ ರಕ್ಷಣೆಗೆ ಅಗತ್ಯ ಸಾಮರ್ಥ್ಯ ವೃದ್ಧಿಗೆ ತರಬೇತಿಯನ್ನೂ ಕೊಡಲಾಗಿದೆ. ಮಹಿಳೆಯರಿಗೆ ತೊಂದರೆ ಇರುವ ಕುರಿತು ಕರೆ ಬಂದ ತಕ್ಷಣವೇ ಈ ಪಡೆಯು ರಕ್ಷಣೆಗೆ ಕಾರ್ಯಪ್ರವೃತ್ತವಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.