ADVERTISEMENT

ಎನ್‌ಸಿಸಿ ವಿದ್ಯಾರ್ಥಿಗಳ ಚಾರಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 13:16 IST
Last Updated 15 ಡಿಸೆಂಬರ್ 2019, 13:16 IST
ಬೆಳಗಾವಿಯಲ್ಲಿ ಎನ್‌ಸಿಸಿ ನಿರ್ದೇಶನಾಲಯದಿಂದ ಹಮ್ಮಿಕೊಂಡಿರುವ ಚಾರಣ ಶಿಬಿರ ಉದ್ಘಾಟಿಸಿದ ಶಾಸಕ ಅನಿಲ ಬೆನಕೆ ಮಾತನಾಡಿದರು
ಬೆಳಗಾವಿಯಲ್ಲಿ ಎನ್‌ಸಿಸಿ ನಿರ್ದೇಶನಾಲಯದಿಂದ ಹಮ್ಮಿಕೊಂಡಿರುವ ಚಾರಣ ಶಿಬಿರ ಉದ್ಘಾಟಿಸಿದ ಶಾಸಕ ಅನಿಲ ಬೆನಕೆ ಮಾತನಾಡಿದರು   

ಬೆಳಗಾವಿ: ಇಲ್ಲಿನ ಎನ್‌ಸಿಸಿ ನಿರ್ದೇಶನಾಲಯ (ಕರ್ನಾಟಕ ಹಾಗೂ ಗೋವಾ)ದಿಂದ ಡಿ. 21ರವರೆಗೆ ಹಮ್ಮಿಕೊಂಡಿರುವ ಅಖಿಲ ಭಾರತ ಎನ್‌ಸಿಸಿ ಟ್ರೆಕ್ಕಿಂಗ್‌ ಶಿಬಿರ ‘ಬೆಳಗಾವಿ ಟ್ರೆಕ್‌–2019’ ಭಾನುವಾರ ಆರಂಭಗೊಂಡಿತು.

ಬೆಳಗುಂದಿ– ಹಂಗರಗಾ, ಬಸುರ್ತೆ– ವೈಜನಾಥ ದೇವಸ್ಥಾನದವರೆಗೆ ನಡೆದ ಮೊದಲ ಚಾರಣಕ್ಕೆ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಗೋವಾ ಸೇರಿದಂತೆ 12 ರಾಜ್ಯಗಳ ಹಾಗೂ 7 ಎನ್‌ಸಿಸಿ ನಿರ್ದೇಶನಾಲಯಗಳ 500 ಕೆಡೆಟ್‌ಗಳು ಪಾಲ್ಗೊಂಡಿದ್ದಾರೆ.

ಬೆಳಗುಂದಿ ಹಾಗೂ ಮಹಿಪಾಲಗಡ ಪ್ರದೇಶದಲ್ಲಿ ಚಾರಣ ನಡೆಯಲಿದೆ. ಕೆಡೆಟ್‌ಗಳು ಎಂಎಲ್‌ಐಆರ್‌ಸಿ ಕಾಮಾಂಡೊ ವಿಂಗ್‌ಗೆ ಭೇಟಿ ನೀಡಲಿದ್ದಾರೆ. ಅಧ್ಯಯನ ಪ್ರವಾಸಕ್ಕಾಗಿ ಗೋಕಾಕ ಹಾಗೂ ಚನ್ನಮ್ಮನಕಿತ್ತೂರಿಗೆ ತೆರಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ.

ADVERTISEMENT

ಕರ್ನಲ್‌ ಎ.ಕೆ. ವರ್ಮ, ಲೆಫ್ಟಿನೆಂಟ್ ಕರ್ನಲ್‌ ಬಾಲಕೃಷ್ಣ ಎಸ್., ಬೆಳಗಾವಿ ಎನ್‌ಸಿಸಿ ಗ್ರೂಪ್‌ ಕೇಂದ್ರಸ್ಥಾನದ ಗ್ರೂಪ್ ಕಮಾಂಡರ್‌ ಕರ್ನಲ್‌ ಜೆ.ಜೆ. ಅಬ್ರಾಹಂ ಮತ್ತು ಸೂಪರಿಂಟೆಂಡೆಂಟ್ ಸಿ. ಸುಭಾಷ್‌ಚಂದ್ರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.