ADVERTISEMENT

ಪುಕ್ಕಟೆ ಪ್ರಚಾರಕ್ಕೆ ಸಿ.ಎಂಗೆ ಪತ್ರ ಬರೆಯಬೇಡಿ: ಅಶೋಕ ಚಂದರಗಿ

ಭರಮಗೌಡ ಕಾಗೆ ಅವರ ಪ್ರತ್ಯೇಕ ರಾಜ್ಯ ಬೇಡಿಕೆಗೆ ಹೋರಾಟಗಾರ ಅಶೋಕ ಚಂದರಗಿ ಗರಂ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 0:08 IST
Last Updated 13 ನವೆಂಬರ್ 2025, 0:08 IST
ಅಶೋಕ ಚಂದರಗಿ
ಅಶೋಕ ಚಂದರಗಿ   

ಬೆಳಗಾವಿ: ‘ಉತ್ತರ ಕರ್ನಾಟಕದ ಶಾಸಕರು ಅಭಿವೃದ್ಧಿಗೆ ಶ್ರಮಿಸಲಿ. ಆ ಮೇಲೆ ಪ್ರತ್ಯೇಕ ರಾಜ್ಯದ ವಿಷಯ ಮಾತನಾಡಲಿ. ಸುಮ್ಮನೆ ಪ್ರಚಾರ, ರಾಜಕೀಯ ಕಾರಣಕ್ಕೆ ರಾಜ್ಯ ವಿಭಜನೆ ಬಗ್ಗೆ ಸಿ.ಎಂಗೆ ಪತ್ರ ಬರೆಯಬೇಡಿ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಕಿಡಿಕಾರಿದ್ದಾರೆ.

ಕಾಗವಾಡ ಶಾಸಕ ಭರಮಗೌಡ ಕಾಗೆ ಅವರು ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಖಂಡಿಸಿದ್ದಾರೆ.

‘ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳ 96 ಶಾಸಕರು ಇದ್ದಾರೆ. ಯಾರೂ ಏಕೆ ಅಭಿವೃದ್ಧಿಯಲ್ಲಿ ಮುಂದೆ ಇಲ್ಲ? ಮೊದಲು ತಮ್ಮ ಕೆಲಸ ಸರಿಯಾಗಿ ಮಾಡಿದ್ದರೆ ಇಂಥ ಸ್ಥಿತಿ ಬರುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಭರಮಗೌಡ ಕಾಗೆ ಅವರು ಮೊದಲು 10 ಶಾಸಕರನ್ನು ಸೇರಿಸಿ ಇದೇ ವಿಷಯದ ಮೇಲೆ ಚುನಾವಣೆಗೆ ಸ್ಪರ್ಧಿಸಿ, ಸಾಮರ್ಥ್ಯ ಸಾಬೀತು ಮಾಡಲಿ’ ಎಂದು ಸವಾಲು ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.