ADVERTISEMENT

ಅಥಣಿ ವಿದ್ಯಾರ್ಥಿನಿಗೆ 6 ಸ್ವರ್ಣ ಪದಕ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 13:40 IST
Last Updated 24 ಅಕ್ಟೋಬರ್ 2020, 13:40 IST
ಸ್ನೇಹಾ ಕುಲಕರ್ಣಿ
ಸ್ನೇಹಾ ಕುಲಕರ್ಣಿ   

ಬೆಳಗಾವಿ: ಅಥಣಿಯ ವಿದ್ಯಾರ್ಥಿನಿ ಸ್ನೇಹಾ ನಾರಾಯಣ ಕುಲಕರ್ಣಿ ಎಂ.ಎಸ್ಸಿ. ಭೌತವಿಜ್ಞಾನ ವಿಷಯದಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿ ಮೈಸೂರು ವಿಶ್ವವಿದ್ಯಾಲಯದಿಂದ 6 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ.

ಅವರು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸ್ನಾತಕೋತ್ತರ ಪದವಿಯಲ್ಲಿ ಟಾಪರ್‌ ಎನಿಸಿ ಸಾಧನೆ ತೋರಿದ್ದಾರೆ. ಅವರಿಗೆ ಈಚೆಗೆ ಮೈಸೂರಿನಲ್ಲಿ ನಡೆದ 100ನೇ ಘಟಿಕೋತ್ಸವದಲ್ಲಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಪದಕ ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು.

‘ನನ್ನ ಈ ಸಾಧನೆಗೆ ಅಮ್ಮನೇ ಸ್ಫೂರ್ತಿ. ಕಷ್ಟದ ದಿನಗಳಲ್ಲಿ ಆತ್ಮಸ್ಥೈರ್ಯ ತುಂಬಿ ಬೆಳೆಸಿದ್ದಾಳೆ. ನನ್ನ ಯಶಸ್ಸು ಅವಳಿಗೆ ಸಲ್ಲುತ್ತದೆ. ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು. ಉಪನ್ಯಾಸಕಿಯಾಗಬೇಕು. ನನ್ನಂತೆ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು ಎಂಬುದು ನನ್ನ ಆಸೆಯಾಗಿದೆ’ ಎನ್ನುತ್ತಾರೆ ಅವರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.