ನಿಪ್ಪಾಣಿ: ‘1960ರಿಂದ ವಿದ್ಯಾದಾನ ಮಾಡುತ್ತ ಬಂದಿರುವ ನಮ್ಮ ಮಂಡಳದಿಂದ ವೈದ್ಯಕೀಯ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಆಯುರ್ವೇದಿಕ ಮಹಾವಿದ್ಯಾಲಯ ಆರಂಭಿಸಲು ಚಿಂತನೆ ನಡೆದಿದೆ’ ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳ(ವಿಎಸ್‍ಎಂ)ದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.
ಸ್ಥಳೀಯ ವಿಎಸ್‍ಎಂ ಸೋಮಶೇಖರ ಆರ್.ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿಯ ವಿಎಸ್‍ಎಂ ಕನ್ವೆನ್ಶನ್ ಹಾಲ್‍ನಲ್ಲಿ ಭಾನುವಾರ ನಡೆದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
‘ಎಂಬಿಎ-ಎಂಸಿಎ ಕಟ್ಟಡದಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಎಐಸಿಟಿಯ ಮತ್ತು ವಿಟಿಯೂದಿಂದ ಅನುಮೋದನೆ ಸಿಕ್ಕ ಎಂಬಿಎ-ಎಂಸಿಎ ಕೋರ್ಸ್‍ಗಳನ್ನು ಆರಂಭಿಸಲಾಗುವುದು’ ಎಂದರು.
ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ, ಸಿಇಒ ಸಿದ್ಧಗೌಡ ಪಾಟೀಲ, ಪದವಿ ಪೂರ್ವ ಪ್ರಾಚಾರ್ಯ ನಿಂಗಪ್ಪ ಮಾದಣ್ಣವರ ಮಾತನಾಡಿದರು. ಮಂಡಳದ ಅಧ್ಯಕ್ಷ ಚಂದ್ರಕಾಂತ ತಾರಳೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಚಾಲಕ ರಾವಸಾಹೇಬ ಪಾಟೀಲ ಹಿಂದಿನ ವರ್ಷದ ನಡುವಳಿಕೆಗಳನ್ನು ಓದಿ ಅನುಮೋದನೆ ಪಡೆದರು.
ಕಿಶೋರ ಬಾಳಿ(ಸಿಎ), ಸಿಇಒ ಸಿದ್ಧಗೌಡ ಪಾಟೀಲ, ವಿಎಸ್‍ಎಂಎಸ್‍ಆರ್‌ಕೆಐಟಿ ಪ್ರಾಚಾರ್ಯ ಉಮೇಶ ಪಾಟೀಲ, ಡಿಪ್ಲೊಮಾ ಪ್ರಾಚಾರ್ಯ ಬಸವರಾಜ ಕರೋಶಿ, ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಿಕ್ಷಕ ಆದಮಅಲಿ ಪೀರಜಾದೆ, ಪ್ರೊ. ಬಾಹುಬಲಿ ಮಗದುಮ ಅವರನ್ನು ಸತ್ಕರಿಸಲಾಯಿತು.
ಉಪಾಧ್ಯಕ್ಷ ಎಂಜಿನಿಯರ್ ಸುನೀಲ ಪಾಟೀಲ, ರಜತ ಢೋಲೆ, ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ಹರಿಶ್ಚಂದ್ರ ಶಾಂಡಗೆ, ಸಂಜಯ ಮೊಳವಾಡೆ, ಆನಂದ ಗಿಂಡೆ, ಅವಿನಾಶ ಪಾಟೀಲ, ಪ್ರವೀಣ ಪಾಟೀಲ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.