
ಬೈಲಹೊಂಗಲ: ತಾಲ್ಲೂಕಿನ ಮರಕುಂಬಿ ಗ್ರಾಮದ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ದೇವಿ ಜಾತ್ರೋತ್ಸವ ಸಮೀಪಿಸುತ್ತಿದ್ದು, ಈಗಾಗಲೇ ಭಕ್ತರು ದಂಡು ವಿವಿಧೆಡೆಯಿಂದ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ.
ದೇವಸ್ಥಾನದಲ್ಲಿ ಭಕ್ತರ ಸರದಿಸಾಲು ಸಾಮಾನ್ಯ ನೋಟವಾಗಿದೆ. 10ರಿಂದ 15 ಸಾವಿರದಷ್ಟು ಬರುತ್ತಿರುವ ಭಕ್ತರಿಗಾಗಿ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ದೇವಿಯ ಮಹಿಮೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗಿರುವುದನ್ನು ಗಮನಿಸಿ, ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ.
ಬೈಲಹೊಂಗಲ, ಯರಗಟ್ಟಿ, ಸವದತ್ತಿ, ಬೆಳಗಾವಿ ಕಡೆಯಿಂದ ಬಸ್, ಕಾರು, ಬೈಕ್‌ಗಳಲ್ಲಿ ಭಕ್ತರು ಬರುತ್ತಿದ್ದಾರೆ. ಕಳೆದ ಐದು ತಿಂಗಳಿನಿಂದ ಭಕ್ತರಿಗಾಗಿ ಊಟ, ಉಪಹಾರದ ವ್ಯವಸ್ಥೆ ದಿನದ 24 ಗಂಟೆಯೂ ನಡೆಯುತ್ತಿದೆ.
ಎಲ್ಲೆಡೆ ದೇವಿ ದೇವಸ್ಥಾನದ ಮಹಿಮೆ ಹರಡಿದೆ. ರಾಜ್ಯ, ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ, ಚಹದ ಅಂಗಡಿ, ಹೊಟೇಲಗಳಲ್ಲಿ, ಬಸ್ ಗಳಲ್ಲಿಯೂ ಎಲ್ಲೆಡೆಯೂ ಶ್ರೀ ಚಕ್ರ ಸಮೇತ, ಶ್ರೀ ಲಕ್ಷ್ಮೀ ದೇವಿ ಸಾಲಿಗ್ರಾಂ ಚರ್ಚೆ ನಡೆದಿದೆ.
‘ಒಂಭತ್ತು ತಿಂಗಳು ಹಿಂದೆ ಶ್ರೀಚಕ್ರ ಹಾಗೂ ಶ್ರೀಲಕ್ಷ್ಮೀ ಸಾಲಿಗ್ರಾಂ ಸ್ಥಾಪಿಸಲಾಗಿದೆ. ದಕ್ಷಿಣ ಏಷ್ಯಾದಲ್ಲಿ ವಿಶೇಷ ಸಾಲಿಗ್ರಾಂ ಇದಾಗಿದೆ. ಶಕ್ತಿ ದೇವತೆಗಳ ದುಷ್ಟ ಶಕ್ತಿಗಳ ಪ್ರವೇಶ ಇರುವುದಿಲ್ಲ’ ಎನ್ನುತ್ತಾರೆ ದೇವಸ್ಥಾನ ಧರ್ಮದರ್ಶಿ ಜಿ.ಬಿ.ಮಲ್ಲೇಶ ಗುರೂಜಿ.
179 ಅಡಿ ಎತ್ತರ 4 ಅಡಿ ಗದ್ದುಗೆ ಮೂರ್ತಿಯೂ ಐದು ವರ್ಷಕ್ಕೆ 2030ಕ್ಕೆ ವಿಶ್ವವೇ ತಿರುಗಿ ನೊಡುವಂತೆ ನಿರ್ಮಾಣವಾಗಲಿದೆ ಎನ್ನುತ್ತಾರೆ ಅವರು.
ವಿವಿಧ ಬೇಡಿಕೆ ಈಡೇರಿಸುವಂತೆ ಹಾಗೂ ಸಮಸ್ಯೆ ಪರಿಹಾರ ಮಾಡುವಂತೆ ದೇವರಿಗೆ ಅಕ್ಕಿ ಬೆಲ್ಲ ಉಪ್ಪಿನ ದೀಪದ ಎಣ್ಣೆ ಸೇವೆಗಳನ್ನು ಭಕ್ತರು ನೆರವೇರಿಸುತ್ತಾರೆ
-ಮಹಾಂತೇಶ ಕೌಜಲಗಿ ಭೂದಾನಿ
ಜನವರಿ 5ರಿಂದ ನಡೆಯಲಿರುವ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ದತೆಗಳು ನಡೆದಿವೆ
-ರಾಹುಲ ಕೌಜಲಗಿ ಯುವ ಮುಖಂಡ
’50 ಗ್ರಾಮಗಳಿಂದ ಪಲ್ಲಕ್ಕಿ‘
ಜ.4ರಿಂದ 7ರವರೆಗೆ ದೇವಸ್ಥಾನ ಜಾತ್ರೆ ನಡೆಯಲಿದೆ. ಜ.5 ರಂದು 50 ಗ್ರಾಮಗಳಿಂದ ದೇವರುಗಳ ಪಲ್ಲಕ್ಕಿಗಳು ಆಗಮಿಸುವವು. ಜ.6 ರಂದು ದೇವರುಗಳಿಗೆ ಉಡಿ ತುಂಬುವುದು ಚಂಡಿಕಾ ಹೋಮ ಸಾಮೂಹಿಕ ವಿವಾಹಗಳು ಜರುಗುವುವು. ಜ.7 ರಂದು ಬೈಲಹೊಂಗಲದ ಚನ್ನಮ್ಮಾ ಸಮಾಧಿಯಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಅಂಬಾರಿ ಉತ್ಸವ ಮೆರವಣಿಗೆ ದೇವಸ್ಥಾನಕ್ಕೆ ವಿಶೇಷ ರೀತಿಯ ದೀಪಾಲಂಕಾರ ಹಲವಾರು ವಾದ್ಯ ಮೇಳಗಳು ವಿಶೇಷ ಗೋಷ್ಠಿಗಳು ಜರುಗಲಿವೆ ಎಂದು ಧರ್ಮದರ್ಶಿ ಡಾ.ಜಿ.ಬಿ.ಮಲ್ಲೇಶ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.