ADVERTISEMENT

ಕುಟುಂಬದ ವಿರುದ್ಧ ಟೀಕೆ | ಕಾನೂನು ಹೋರಾಟ: ಬಾಲಚಂದ್ರ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 1:19 IST
Last Updated 10 ಅಕ್ಟೋಬರ್ 2025, 1:19 IST
<div class="paragraphs"><p>ಬಾಲಚಂದ್ರ ಜಾರಕಿಹೊಳಿ</p></div>

ಬಾಲಚಂದ್ರ ಜಾರಕಿಹೊಳಿ

   

ಬೆಳಗಾವಿ: ‘ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಮಾಧ್ಯಮ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ನಮ್ಮ ಕುಟುಂಬದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಟೀಕಿಸುವವರ ವಿರುದ್ಧ ದೀಪಾವಳಿ ಹಬ್ಬದ ನಂತರ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಮ್ಮ ವಿರುದ್ಧ ನೀಡಲಾದ ಹೇಳಿಕೆಗಳು ಒಳ್ಳೆಯ ಅಭಿರುಚಿಯಿಂದ ಕೂಡಿಲ್ಲ. ಚುನಾವಣೆಗಳಲ್ಲಿ ಗೆದ್ದರೂ–ಸೋತರೂ, ಅದು ವೈಯಕ್ತಿಕ ದಾಳಿಗೆ ಬಳಕೆ ಆಗಬಾರದು’ ಎಂದು ಮಾಜಿ ಸಂಸದ ರಮೇಶ ಕತ್ತಿ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ತಿಳಿಸಿದರು. 

ADVERTISEMENT

‘ಯಾರ ವಿರುದ್ಧವಾದರೂ ಹೇಳಿಕೆ ನೀಡುವಾಗ ಮಿತಿ ಇರಬೇಕು. ವ್ಯಕ್ತಿಗಳು ಮತ್ತು ಕುಟುಂಬಗಳ ವಿರುದ್ಧ ಹೇಳಿಕೆ ನೀಡುವವರು  ಕೀಳುಮಟ್ಟಕ್ಕೆ ಇಳಿಯಬಾರದು. ರಾಜಕೀಯ ಹೇಳಿಕೆಗಳ ವಿಷಯದಲ್ಲಿ ಹಗುರವಾಗಿ ಮಾತನಾಡಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.