ADVERTISEMENT

ಬೆಳಗಾವಿ | ವಾಹನಗಳ ಕಳ್ಳತನ: ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 5:22 IST
Last Updated 2 ಫೆಬ್ರುವರಿ 2026, 5:22 IST
<div class="paragraphs"><p>ಬಂಧನ</p></div>

ಬಂಧನ

   

ಬೆಳಗಾವಿ: ನಗರದ ವಿವಿಧೆಡೆ 20ಕ್ಕೂ ಅಧಿಕ ಬೈಕ್ ಕದ್ದ ಆರೋಪದಡಿ ಒಬ್ಬನನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಹುಕ್ಕೇರಿ ತಾಲ್ಲೂಕಿನ ಬೆನಕನಹೊಳಿಯ ಸಂಜು ಮೇಖಳಿ ಬಂಧಿತ.

ADVERTISEMENT

ಈಚೆಗೆ ಕೋಟೆ ರಸ್ತೆಯಲ್ಲಿ ಮತ್ತು ಕಪಿಲೇಶ್ವರ ದೇವಸ್ಥಾನ ಬಳಿ ಈತ ವಾಹನಗಳ ಕಳ್ಳತನ ಮಾಡಿದ್ದ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.  ₹2,78,000 ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆದಿದ್ದು, ಮಾರ್ಕೆಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.