ADVERTISEMENT

ಸ್ಪೃಶ್ಯ ಜಾತಿಗಳನ್ನು ಎಸ್‌.ಸಿ ಪಟ್ಟಿಯಿಂದ ಕೈಬಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 12:11 IST
Last Updated 12 ಜೂನ್ 2020, 12:11 IST
ಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕೆಂದು ಶಕ್ತಿ ಸಂಘದ ಸದಸ್ಯರು ಬೆಳಗಾವಿಯಲ್ಲಿ ಶುಕ್ರವಾರ ಒತ್ತಾಯಿಸಿದರು
ಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕೆಂದು ಶಕ್ತಿ ಸಂಘದ ಸದಸ್ಯರು ಬೆಳಗಾವಿಯಲ್ಲಿ ಶುಕ್ರವಾರ ಒತ್ತಾಯಿಸಿದರು   

ಬೆಳಗಾವಿ: ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿದ್ದ ಸ್ಪೃಶ್ಯ ಜಾತಿಗಳನ್ನು ಕೈಬಿಡಬೇಕು ಎಂದು ಶಕ್ತಿ ಸಂಘದ ಸದಸ್ಯರು ನಗರದಲ್ಲಿ ಶುಕ್ರವಾರ ಆಗ್ರಹಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಿದ ಸಂಘದ ಅಧ್ಯಕ್ಷ ಲಕ್ಷ್ಮಣ ದಶರಥ ಕೋಲಕಾರ, ‘ಅಸ್ಪೃಷ್ಯತೆಗೆ ಒಳಗಾಗಿದ್ದ ಹೊಲೇರ, ಮಾದಿಗ, ಡೋರ, ಚಂಬಾರ ಹಾಗೂ ಚಲವಾದಿ ಜಾತಿಯ ಜನರನ್ನು ಒಳಗೊಂಡಂತೆ 1950ರಲ್ಲಿ ಪರಿಶಿಷ್ಟ ಜಾತಿಯ ಪಟ್ಟಿ ತಯಾರಿಸಲಾಗಿತ್ತು. ಆದರೆ, ನಂತರ ಕೆಲವು ಸ್ಪೃಶ್ಯ ಜಾತಿಗಳನ್ನೂ ಇದರಲ್ಲಿ ಸೇರಿಸಲಾಯಿತು. ಈ ಜಾತಿಗಳು ಬೇರೆ ರಾಜ್ಯಗಳಲ್ಲಿ ಒಬಿಸಿ ಪಟ್ಟಿಯಲ್ಲಿವೆ’ ಎಂದು ಹೇಳಿದರು.

‘ಬಂಜಾರಾ, ಭೋವಿ, ಕೊರಮ, ಕೊರಚ ಒಳಗೊಂಡಿರುವ ಸ್ಪೃಶ್ಯ ಜಾತಿಗಳನ್ನು ಈ ಪಟ್ಟಿಯಿಂದ ಕೈಬಿಡುವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಈ ಆದೇಶವನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕು. ಅಸ್ಪೃಶ್ಯ ಜಾತಿಗಳನ್ನು ಒಳಗೊಂಡ ಪರಿಷ್ಕೃತ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.