ADVERTISEMENT

ಬೆಳಗಾವಿ: ಪ್ರತಿಭಟನಾ ವೇದಿಕೆಗಳು ಜನರಿಲ್ಲದೆ ಭಣಭಣ...

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 4:30 IST
Last Updated 9 ಡಿಸೆಂಬರ್ 2025, 4:30 IST
<div class="paragraphs"><p>ಬೆಳಗಾವಿ ತಾಲ್ಲೂಕಿನ ಹಲಗಾದ ಸುವರ್ಣ ಗಾರ್ಡನ್‌ ಬಳಿ ಇರುವ ಪ್ರತಿಭಟನಾ ವೇದಿಕೆ ಸೋಮವಾರ&nbsp; ಜನರಿಲ್ಲದೆ ಬಿಕೋ ಎಂದಿತು&nbsp;</p></div>

ಬೆಳಗಾವಿ ತಾಲ್ಲೂಕಿನ ಹಲಗಾದ ಸುವರ್ಣ ಗಾರ್ಡನ್‌ ಬಳಿ ಇರುವ ಪ್ರತಿಭಟನಾ ವೇದಿಕೆ ಸೋಮವಾರ  ಜನರಿಲ್ಲದೆ ಬಿಕೋ ಎಂದಿತು 

   

  ಪ್ರಜಾವಾಣಿ ಚಿತ್ರ

ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ತಾಲ್ಲೂಕಿನ ಹಲಗಾದ ಸುವರ್ಣ ಗಾರ್ಡನ್‌ ಮತ್ತು ನಗರದ ಬಿ.ಎಸ್‌.ಯಡಿಯೂರಪ್ಪ ಮಾರ್ಗದ ಬಳಿ ಇರುವ ಪ್ರತಿಭಟನಾ ವೇದಿಕೆಗಳು ಜನರಿಲ್ಲದೆ ಭಣಗುಡಿದವು.

ADVERTISEMENT

ಈ ಬಾರಿ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಅನುಮತಿ ಪಡೆದಿವೆ. ಡಿ.19ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಪ್ರತಿಭಟನೆಗಳ ಸಂಖ್ಯೆ 100ರ ಗಡಿ ದಾಟುವ ಸಾಧ್ಯತೆ ಇದೆ. ಆದರೆ, ಸೋಮವಾರ ಯಾವೊಂದು ಸಂಘಟನೆಯವರು ಪ್ರತಿಭಟನೆ ನಡೆಸದ್ದರಿಂದ ವೇದಿಕೆಗಳು ಜನರಿಲ್ಲದೆ ಬಿಕೋ ಎಂದವು.

ಅಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ವಿಶ್ರಾಂತಿ ಮೂಡ್‌ನಲ್ಲಿದ್ದರು.

ಮಂಗಳವಾರದಿಂದ ಎರಡೂ ವೇದಿಕೆಗಳಲ್ಲಿ ವಿವಿಧ ಸಂಘಟನೆಯವರು ಪ್ರತಿಭಟನೆ ನಡೆಸಲಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.