ADVERTISEMENT

ಬೆಳಗಾವಿ | ಗಾಂಜಾ ಮಾರಾಟ: ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 2:48 IST
Last Updated 23 ಆಗಸ್ಟ್ 2025, 2:48 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಳಗಾವಿ: ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಗುರುವಾರ ಗಾಂಜಾ ಮಾರುತ್ತಿದ್ದ ಒಬ್ಬನನ್ನು ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಬಾಗವಾನ ಗಲ್ಲಿಯ ಸಲೀಮ್‌ ಕಮರುದ್ದೀನ್‌ ಸೌದಾಗರ ಬಂಧಿತ. ‘ಈತ ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟದಲ್ಲಿ ಸಕ್ರಿಯವಾಗಿದ್ದು, 30 ಅಪರಾಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಬೆಳಗಾವಿಯಿಂದ ತಪ್ಪಿಸಿಕೊಂಡು ಹೋಗಿ ಮಹಾರಾಷ್ಟ್ರದಲ್ಲಿ ವಾಸವಾಗಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಸೇವನೆ: ಒಬ್ಬನ ಬಂಧನ

ಬೆಳಗಾವಿ: ಇಲ್ಲಿನ ಬಸವೇಶ್ವರ ವೃತ್ತದ ಬಳಿ ಗುರುವಾರ ಗಾಂಜಾ ಸೇವನೆ ಆರೋಪದಡಿ ಜಟಪಟ ಕಾಲೊನಿಯ  ಪ್ರಶಾಂತ ರಜಪೂತ ಎಂಬಾತನನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಮದ್ಯ ಮಾರಾಟ: ಓರ್ವನ ಬಂಧನ

ಬೆಳಗಾವಿ: ತಾಲ್ಲೂಕಿನ ಹುದಲಿ ಗ್ರಾಮದಲ್ಲಿ ಗುರುವಾರ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಹುದಲಿಯ ಸತ್ಯಪ್ಪ ತಲ್ಲೂರಿ ಎಂಬಾತನನ್ನು ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ₹1,400 ಮೌಲ್ಯದ ವಿವಿಧ ಕಂಪನಿಗಳ ಮದ್ಯ ವಶಕ್ಕೆ ಪಡೆಯಲಾಗಿದೆ.

ಒಬ್ಬನ ಬಂಧನ

ಬೆಳಗಾವಿ: ಇಲ್ಲಿನ ಗಣೇಶಪುರ ಮುಖ್ಯರಸ್ತೆಯ ಸೈನಿಕ ಕಾಲೊನಿ ಕ್ರಾಸ್ ಹತ್ತಿರ ಗುರುವಾರ ಅಕ್ರಮವಾಗಿ ಆಯುಧ ಇಟ್ಟುಕೊಂಡು ತಿರುಗಾಡುತ್ತಿದ್ದ ಇಬ್ಬರನ್ನು ಕ್ಯಾಂಪ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ಗಣೇಶಪುರದ ಲಕ್ಷ್ಮಿ ನಗರದ ಆಕಾಶ ಪೀಟರ್, ಅಮನ್‌ರಾಜ್‌ ಬಡೋದೇಕರ ಬಂಧಿತರು. ಅವರಿಂದ ಹರಿತವಾದ ತಲ್ವಾರ್‌ ವಶಕ್ಕೆ ಪಡೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.