ADVERTISEMENT

‘ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ನಾಂದಿ ಹಾಡಿದವರು’

ಮಾತೆ ಮಹಾದೇವಿ ಸಂಸ್ಮರಣೋತ್ಸವ, ಗ್ರಂಥ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 14:52 IST
Last Updated 8 ಜುಲೈ 2019, 14:52 IST
ಬೆಳಗಾವಿಯಲ್ಲಿ ಭಾನುವಾರ ನಡೆದ ಮಾತೆ ಮಹಾದೇವಿ ಪ್ರಥಮ ಸಂಸ್ಮರಣೋತ್ಸವದಲ್ಲಿ ಉಳವಿಯ ಚನ್ನಬಸವಾನಂದ ಸ್ವಾಮೀಜಿ ಸಂಪಾದನೆಯ ‘ಕಾಲಜ್ಞಾನ ನಿರ್ಣಯ’ ಗ್ರಂಥವನ್ನು ಗಣ್ಯರು ಬಿಡುಗಡೆ ಮಾಡಿದರು
ಬೆಳಗಾವಿಯಲ್ಲಿ ಭಾನುವಾರ ನಡೆದ ಮಾತೆ ಮಹಾದೇವಿ ಪ್ರಥಮ ಸಂಸ್ಮರಣೋತ್ಸವದಲ್ಲಿ ಉಳವಿಯ ಚನ್ನಬಸವಾನಂದ ಸ್ವಾಮೀಜಿ ಸಂಪಾದನೆಯ ‘ಕಾಲಜ್ಞಾನ ನಿರ್ಣಯ’ ಗ್ರಂಥವನ್ನು ಗಣ್ಯರು ಬಿಡುಗಡೆ ಮಾಡಿದರು   

ಬೆಳಗಾವಿ: ‘ಮಾತೆ ಮಹಾದೇವಿ ಅವರು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ನಾಂದಿ ಹಾಡಿ, ಭದ್ರ‍ಪಡಿಸಿದ ಪ್ರಮುಖರು’ ಎಂದು ಬಸವಧರ್ಮ ಪೀಠದ ನೂತನ ಪೀಠಾಧ್ಯಕ್ಷೆ ಗಂಗಾದೇವಿ ಸ್ಮರಿಸಿದರು.

ಲಿಂಗಾಯತ ಧರ್ಮ ಮಹಾಸಭಾ ಮತ್ತು ರಾಷ್ಟ್ರೀಯ ಬಸವ ದಳ ಜಿಲ್ಲಾ ಘಟಕಗಳು, ವಿವಿಧ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಡೆದ ಮಾತೆ ಮಹಾದೇವಿ ಪ್ರಥಮ ಸಂಸ್ಮರಣೋತ್ಸವದಲ್ಲಿ ಉಳವಿಯ ಚನ್ನಬಸವಾನಂದ ಸ್ವಾಮೀಜಿ ಸಂಪಾದನೆಯ ‘ಕಾಲಜ್ಞಾನ ನಿರ್ಣಯ’ (ಬಸವಧರ್ಮ ಯುಗಾರಂಭ) ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮಹಾದೇವಿ ಅವರ ಬಸವ ಸೇವೆ ಅನನ್ಯ. ಬಸವಣ್ಣನವರ ಸಾಧನೆ, ಸಾಹಿತ್ಯ ಮತ್ತು ಸಂದೇಶಗಳನ್ನು ಸಂಗೀತ, ಸಾಹಿತ್ಯ, ಸಿನಿಮಾ, ನಾಟಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವೈಚಾರಿಕವಾಗಿ ಸಾರುತ್ತಾ ಸ್ಮರಣೀಯ ಸೇವೆ ಮಾಡಿ ಅಮರರಾಗಿದ್ದಾರೆ. ಸ್ವತಂತ್ರ ಲಿಂಗಾಯತ ಧರ್ಮ ಹೋರಾಟಕ್ಕೆ ತಾರ್ಕಿಕ ಮತ್ತು ಸಾಮಾಜಿಕ ನೆಲೆ ಒದಗಿಸಿ, ದಿಟ್ಟ ವೈಚಾರಿಕ ನೆಲೆಯಲ್ಲಿ ಹೋರಾಟದ ಕಿಚ್ಚು ಹಚ್ಚಿದವರು. ಧೈರ್ಯ, ಛಲಗಳನ್ನು ತುಂಬಿದ ಮಹಾನ್ ಬಸವ ಭಾವದ ಮಹಾನ್ ಚೇತನ. ವಿಶ್ವಗುರು ಬಸವಣ್ಣ ಸಂಸ್ಥಾಪಿಸಿದ ವಿಶಿಷ್ಟ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಯೇ ಪಡೆಯುವುದೇ ಅವರಿಗೆ ಅರ್ಪಿಸುವ ದೊಡ್ಡ ಶ್ರದ್ಧಾಂಜಲಿ’ ಎಂದು ತಿಳಿಸಿದರು.

ADVERTISEMENT

ನೇಗಿನಹಾಳದ ಗುರು ಮಡಿವಾಳೇಶ್ವರ ಶಿವಯೋಗಿ ಮಠದ ಬಸವಸಿದ್ಧಲಿಂಗ ಸ್ವಾಮೀಜಿ, ವಿಶ್ವಗುರು ಬಸವ ಮಂಟಪದ ಸಂಚಾಲಕ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡ ಎಸ್. ದಿವಾಕರ್ ಉದ್ಘಾಟಿಸಿದರು. ಸವದತ್ತಿಯ ಯುವ ಮುಖಂಡ ಬಸವನಗೌಡ ಗೌಡರ ಗ್ರಂಥದ ಕುರಿತು ಮಾತನಾಡಿದರು.

ಮರಾಠಿ ಸಾಹಿತಿ ಶಾಲಿನಿ ದೊಡ್ಡಮನಿ, ಡಾ.ಅವಿನಾಶ ಕವಿ, ರಾಷ್ಟ್ರೀಯ ಬಸವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಗುಡಸ್, ಶೇಗುಣಸಿ ರಾಚಗೌಡ್ರು ಗೌಡಪ್ಪನವರ, ಬೈಲಹೊಂಗಲದ ಸುಧೀರ ವಾಲಿ, ಡಾ.ಅನ್ನಪೂರ್ಣಾ ಹಿರಿಲಿಂಗಣ್ಣವರ, ಗೋಕಾಕದ ಚನ್ನಬಸು ಬಿಜಲಿ, ಹುಬ್ಬಳ್ಳಿಯ ಶಿವಲಿಂಗಪ್ಪ ಜೋಡಳ್ಳಿ, ಬಿ.ಜಿ. ಹೊಸಗೌಡರ ಮಾತನಾಡಿದರು.

ಬಸವಾಂಕುರದ ವಚನಾ ಗುಡಸ್, ಅನುಪಮಾ ತಿಪ್ಪ, ಬಸವದೀಕ್ಷಾ, ಪ್ರಾರ್ಥನಾ ಗುಡಸ್, ಸಿಂಚನಾ ಗುಡಸ್, ಪ್ರಜ್ಞಾ, ಬಸವಾಕ್ಷರ ನೃತ್ಯ ಪ್ರದರ್ಶಿಸಿದರು.

ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಕೆ. ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಗಣಾಚಾರ ದಳದ ಶರಣಪ್ರಸಾದ್ ಸ್ವಾಗತಿಸಿದರು. ರಾಷ್ಟ್ರೀಯ ಬಸವದಳ ಬೆಳಗಾವಿ ಕಾರ್ಯದರ್ಶಿ ಆನಂದ ಗುಡಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಅಶೋಕ ಬೆಂಡಿಗೇರಿ ನಿರೂಪಿಸಿದರು. ವಿಜಯಲಕ್ಷ್ಮಿ ತೋಟ್ಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.