ADVERTISEMENT

ರಾಮದುರ್ಗ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 15:26 IST
Last Updated 12 ಆಗಸ್ಟ್ 2025, 15:26 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಸಿದ್ನಾಳ ಗ್ರಾಮದಲ್ಲಿ ಮಂಗಳವಾರ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ADVERTISEMENT

ಗೋಕಾಕ ತಾಲ್ಲೂಕಿನ ಬೆನಚಿನಮರಡಿ ಗ್ರಾಮದ ಲಕ್ಷ್ಮೀ ಮಲ್ಲಿಕಾರ್ಜುನ ಗೌಡವ್ವಗೋಳ (24), ಪುತ್ರಿ ಹಾಲವ್ವ (3) ಮತ್ತು ಪುತ್ರ ಹಾಲಪ್ಪ (1) ಮೃತರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕುರಿ ಕಾಯುವ ಕಾಯಕದೊಂದಿಗೆ ರಾಮದುರ್ಗ ತಾಲ್ಲೂಕಿನ ಜಮೀನುಗಳಿಗೆ ಆಗಮಿಸಿದ್ದರು.

ಕಟಕೋಳ ಪೊಲೀಸರು ತಾಯಿ ಮತ್ತು ಒಂದು ಮಗುವಿನ ಶವ ಹೊರತೆಗೆದಿದ್ದಾರೆ. ಇನ್ನೊಂದು ಮಗುವಿನ ಶವಕ್ಕಾಗಿ ಶೋಧ ನಡೆದಿದೆ.

ಪತಿ ಮನೆಯವರು ಹಾಗೂ ಪತ್ನಿ ಮನೆಯವರು ಕುರಿ ಮೇಯಿಸಿಕೊಂಡು ರಾಮದುರ್ಗ ತಾಲ್ಲೂಕಿನ ಬೇರೆ ಬೇರೆ ಗ್ರಾಮಗಳಲ್ಲಿ ವಾಸಿಸುತ್ತಿದ್ದರು. ಆರೋಗ್ಯ ಸರಿ ಇಲ್ಲ ಎಂದು ಹೇಳಿ ಹೋಗಿದ್ದ ಲಕ್ಷ್ಮೀ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಪಿಐ ವಿನಾಯಕ ಬಡಿಗೇರ, ಪಿಎಸ್‌ಐ ಬಸವರಾಜ ಕೊಣ್ಣೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.