ADVERTISEMENT

ಬೆಳಗಾವಿ– ಮುಂಬೈ ನಡುವೆ ಸ್ಟಾರ್‌ ಏರ್‌ ವಿಮಾನ ಹಾರಾಟ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 3:02 IST
Last Updated 28 ಫೆಬ್ರುವರಿ 2026, 3:02 IST
   

ಬೆಳಗಾವಿ: ‘ಸ್ಟಾರ್ ಏರ್’ ವಿಮಾನಯಾನ ಸಂಸ್ಥೆಯು ಈ ಮುಂಚಿತವಾಗಿ ರದ್ದುಗೊಳಿಸಿದ ಬೆಳಗಾವಿ– ಮುಂಬೈ ನಡುವಿನ ವಿಮಾನಯಾನ ಸೇವೆಯನ್ನು ಪುನಃ ಪ್ರಾರಂಭ ಮಾಡಲಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

‘ಕೆಲವು ತಿಂಗಳ ಹಿಂದೆ ಸ್ಟಾರ್ ಸಂಸ್ಥೆಯು ಬೆಳಗಾವಿ– ಮುಂಬೈ ನಡುವೆ ವಿಮಾನಯಾನ ಸೇವೆಯನ್ನು ರದ್ದುಗೊಳಿಸಿತ್ತು. ಈ ಬಗ್ಗೆ ಶೆಟ್ಟರ್ ಅವರು ಸಂಸ್ಥೆಯು ಅಧ್ಯಕ್ಷ ಸಂಜಯ ಘೋಡಾವತ್ ಅವರನ್ನು ಸಂಪರ್ಕಿಸಿ ವಿಮಾನ ಸೇವೆ ಆರಂಭಕ್ಕೆ ಮನವಿ ಮಾಡಿದ್ದರು.

ಮಾರ್ಚ್‌ 29ರಿಂದ ಸೇವೆ ಪ್ರಾರಂಭಿಸಲಿದೆ. ಇದು ಬೆಳಗಾವಿಯನ್ನು ಬೆಳ್ಳಿಗ್ಗೆ 7.20ಕ್ಕೆ ಬಿಟ್ಟು ಮುಂಬೈಯನ್ನು ಬೆಳ್ಳಿಗ್ಗೆ 8.25ಕ್ಕೆ ತಲುಪುವುದು, ಅದರಂತೆ ಮುಂಬೈಯನ್ನು ಸಂಜೆ 19.45ಕ್ಕೆ ಬಿಟ್ಟು ಬೆಳಗಾವಿ ನಗರವನ್ನು 20.50ಕ್ಕೆ ತಲುಪುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.